ಪೆರಾಜೆ ಕಬಡ್ಡಿ: ಮಾಣಿ ತಂಡಕ್ಕೆ ಪ್ರಶಸ್ತಿ

ವಿಟ್ಲ, ಮಾ.25: ಪೆರಾಜೆ ಯುವಕ ಮಂಡಲ ಮತ್ತು ಬುಡೋಳಿ ಸೈಲೆಂಟ್ ಫ್ರೆಂಡ್ ವತಿಯಿಂದ ಇತ್ತೀಚೆಗೆ ನಡೆದ ಸ್ಥಳೀಯಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ತಂಡವು ಪ್ರಥಮ ಸ್ಥಾನ ಗಳಿಸಿದೆ. ಫ್ರೆಂಡ್ಸ್ ಕೆದಿಲ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಮಾಣಿ ತಂಡದ ಹಾರೂನ್ ಹಾಗೂ ನವೀನ್ ಮತ್ತು ಕೆದಿಲ ತಂಡದ ವಿನ್ಸೆಂಟ್ (ವಿನ್ಸಿ) ವೈಯುಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
Next Story





