ಮಗನಿಗೆ ಸರಕಾರಿ ಕೆಲಸ ಸಿಗಲಿಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ತಂದೆ!

ಚೆನ್ನೈ,ಮಾ. 25: ಮಗನಿಗೆ ಹೇಗಾದರೂ ಮಾಡಿ ಸರಕಾರ ಕೆಲಸ ಕೊಡಿಸಬೇಕೆಂದು ನಿರ್ಧರಿಸಿದ ಚೆನ್ನೈಯ ಸರಕಾರಿ ನೌಕರನೊಬ್ಬ ತಾನು ಸರಕಾರಿ ಕೆಲಸದಿಂದ ನಿವೃತ್ತಿಯಾಗಲು ಒಂದು ವಾರ ಇರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೆಲ್ಲೂರು ಜಿಲ್ಲೆಯ ಕಾಟ್‌ಪಾಡಿ ಬಿಡಿಇ ಕಚೇರಿ ನೌಕರ ಮಹಾಲಿಂಗಂ(58) ಇಂತಹ ಸಾಹಸ ಮೆರೆದ ವ್ಯಕ್ತಿಯಾಗಿದ್ದಾನೆ. ಮನೆ ಸಮೀಪದ ಮರಕ್ಕೆ ನೇಣು ಹಾಕಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಮಾಚ್ 31ಕ್ಕೆ ಈತ ನಿವೃತ್ತನಾಗುತ್ತಿದ್ದ ಎಂದು ತಿಳಿದು ಬಂದಿದೆ.
ಅಂಗಿಯ ಜೇಬಿನಲ್ಲಿ ಸಿಕ್ಕ ಪತ್ರದಲ್ಲಿ ತಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ಬರೆದಿದ್ದಾನೆ. ತನ್ನ ಸಾವಿಗೆ ಸಹೋದ್ಯೋಗಿಗಳು ಕಾರಣರು. ಸಹೋದ್ಯೋಗಿಗಳಲ್ಲಿ ಒಬ್ಬ ತನಗೆ ಹೊಡೆದಿದ್ದಾನೆ ಮತ್ತು ಅಪಮಾನಿಸಿದ್ದಾನೆ ಎಂದು ಮಹಾಲಿಂಗಂ ಪತ್ರದಲ್ಲಿ ಬರೆದಿದ್ದಾನೆ. ಆದರೆ ಮಗನಿಗೆ ಕೆಲಸ ಸಿಗಲಿಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪುರಾವೆ ಲಭಿಸಿದೆ, ಒಂದುವಾರ ಮೊದಲು ಇದಕ್ಕೆಂದೇ ಮಹಾಲಿಂಗಂ ಸಿದ್ಧತೆ ನಡೆಸುತ್ತಾ ಬಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಮಹಾಲಿಂಗಂಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಿದ್ದೆವು. ನಿವೃತ್ತನಾಗುತ್ತಿರುವುದು ಮತ್ತು ಮಗನಿಗೆ ಕೆಲಸ ಸಿಗದ್ದರಿಂದ ಮಹಾಲಿಂಗಂ ಖಿನ್ನನಾಗಿದ್ದ ಎಂದು ಸಹೋದ್ಯೋಗಿಗಳು ಹೇಳಿದ್ದಾರೆ.