ಬಿಬಿಎಂಪಿ 9,243.41 ಕೋಟಿ ರೂ.ಗಾತ್ರದ ಬಜೆಟ್ ಮಂಡನೆ

ಬೆಂಗಳೂರು, ಮಾ.25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) 2017-18ನೆ ವಾರ್ಷಿಕ ಸಾಲಿನ 9,243.41ಕೋಟಿ ರೂ.ಗಾತ್ರದ ಬಜೆಟ್ ನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಗುಣಶೇಖರ ಇಂದು ಮಂಡಿಸಿದರು.
ಬಜೆಟ್ ನಲ್ಲಿರುವ ಮುಖ್ಯಾಂಶಗಳು
*ಉಳಿತಾಯ ಬಜೆಟ್ ಮಂಡನೆ.
*ನೂತನ ಪಾರ್ಕಿಂಗ್ ನೀತಿ ಜಾರಿಗೆ ಬಿಬಿಎಂ ಚಿಂತನೆ.
*19ಲಕ್ಷ ಮನೆಗಳಿಗೆ ಡಿಜಿಟಲ್ ನಂಬ್ರ ನೀಡಲು ನಿರ್ಧಾರ
*ಶಾಲಾ ಕಾಲೇಜು ಆವರಣದಲ್ಲಿ ಮಳೆ ಕೊಯ್ಲು
*32ಪ್ರೌಢ ಶಾಲೆಗಳಲ್ಲಿ ಟೆಲಿ ಎಜುಕೇಶನ್ ವ್ಯವಸ್ಥೆ.
*ಕಟ್ಟಡಗಳ ಪರಿಶೀಲನೆ, ಅನುಮೋಧನೆ ಆನ್ಲೈನ್ ಮೂಲಕ
*ಮರಗಳ ಸಮೀಕ್ಷೆಗೆ , ತೆರವಿಗೆ 4 ಕೋಟಿ ರೂ.
*12 ವಲಯಗಳಲ್ಲಿ ಸಮುದಾಯ ಭವನ
*ಸ್ವಚ್ಛತೆಯನ್ನು ಕಾಪಾಡಲು ಮಾರ್ಷಲ್‌ಗಳ ನೇಮಕ ಮಾಡಲು 7 ಕೋಟಿ ರೂ.
*ಎಲ್ಲ ಮನೆಗಳಿಗೂ ಉಚಿತ ಕಸದ ಬುಟ್ಟಿ ನೀಡಲು ನಿರ್ಧಾರ . ಈ ಉದ್ದೇಶಕ್ಕಾಗಿ 5 ಕೋಟಿ ರೂ.
*ಅನುಮತಿಯಿಲ್ಲದೆ ರಸ್ತೆ ಅಗೆಯುವಂತಿಲ್ಲ. ಅನುಮತಿ ಕಡ್ಡಾಯ. ಅನುಮತಿ ಪಡೆಯದೆ ರಸ್ತೆ ತುಂಡರಿಸಿದರೆ ಖಾಸಗಿ ವ್ಯಕ್ತಿಗೆ10 ಲಕ್ಷ ರೂ ಮತ್ತು ಸಂಸ್ಥೆಗಳಾದರೆ 25ಲಕ್ಷ ರೂ. ದಂಡ
ವಿಧಿಸಲಾಗುವುದು.
*ಇ ಆಡಳಿತಕ್ಕೆ ಆದ್ಯತೆ
*ಪೌರವಾಹಿನಿ ತಂಡ ರಚನೆ





