ಮಾ.29ರಂದು ಪೊಸೋಟ್ ನವೀಕೃತ ಜುಮಾ ಮಸೀದಿ ಉದ್ಘಾಟನೆ

ಮಂಜೇಶ್ವರ, ಮಾ.29: ಪೊಸೋಟ್ ನವೀಕೃತಗೊಂಡ ಮುಹಿಯುದ್ದೀನ್ ಜುಮಾ ಮಸೀದಿಯ ಉದ್ಘಾಟನೆ ಹಾಗೂ ವಕ್ಫ್ ನಿರ್ವಹಣೆ ಮಾ.29ರಂದು ಅಸರ್ ನಮಾಝ್‌ನೊಂದಿಗೆ ನಡೆಯಲಿದೆ.
ಅಪರಾಹ್ನ 3 ಗಂಟೆಗೆ ನಡೆಯುವ ಮಖಾಂ ಝಿಯಾರತ್ ಗೆ ಸೈಯದ್ ಅತಾವುಲ್ಲಾ ತಂಙಳ್ ನೇತೃತ್ವ ನೀಡುವರು. ನವೀಕೃತ ಮಸೀದಿಯನ್ನು ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಉದ್ಘಾಟಿಸುವರು. ವಕ್ಫ್ ನಿರ್ವಹಣೆಯನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಸೈಯದ್ ಜಿಫ್ರೀ ಮುತ್ತುಕ್ಕೋಯ ತಂಙಳ್ ನೆರವೇರಿಸುವರು.
ಸಯ್ಯಿದ್ ಆಟ್ಟಕ್ಕೋಯ ತಂಙಳ್ ಕುಂಬೋಲ್ ದುಆಗೆ ನೇತೃತ್ವ ನೀಡುವರು. ಬಳಿಕ ನಡೆಯುವ ಸಮಾರಂಭವನ್ನು ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರಾ ಉದ್ಘಾಟಿಸುವರು. ಜಮಾಅತ್ ಅಧ್ಯಕ್ಷ ಆರ್.ಕೆ.ಅಬ್ದುಲ್ಲ ಬಾವ ಹಾಜಿ ಅಧ್ಯಕ್ಷತೆ ವಹಿಸುವರು.
ಪೊಸೋಟ್ ಮುದರ್ರಿಸ್ ಸೈಯದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್, ಎಂ.ಎ.ಖಾಸಿಂ ಮುಸ್ಲಿಯಾರ್, ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಯು.ಎಂ.ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಭಾಷಣ ಮಾಡುವರು. ಸೈಯದ್ ಅಲೀ ತಂಙಳ್ ಕುಂಬೋಳ್, ಕೆ.ಎಸ್.ಜಹ್‌ಫರ್ ಸಾದಿಖ್ ತಂಙಳ್ ಕುಂಬೋಳ್, ಸೈಯದ್ ಹಾಮಿದ್ ತಂಙಳ್, ಸೈಫುಲ್ಲಾ ತಂಙಳ್, ಅಲೀ ತಂಙಳ್, ಬದ್ರುದ್ದೀನ್ ತಂಙಳ್ , ಸಚಿವ ಯು.ಟಿ ಖಾದರ್, ಶಾಸಕರಾದ ಪಿ.ಬಿ.ಅಬ್ದುಲ್ ರಝಾಕ್, ಎನ್.ಎ ನೆಲ್ಲಿಕ್ಕುನ್ನು, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ, ಸಿ.ಟಿ.ಅಹ್ಮದಾಲಿ, ಹರ್ಷಾದ್ ವರ್ಕಾಡಿ, ಯೆನೆಪೊಯ ಅಬ್ದುಲ್ಲ ಕುಂಞಿ, ಅಝೀಝ್ ಹಾಜಿ ಮೊದಲಾದವರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.







