ಕೆಸಿಎಫ್ ಮಕ್ಕತುಲ್ ಮುಕರ್ರಂ ಸೆಕ್ಟರ್‌ನ ವಾರ್ಷಿಕ ಮಹಾಸಭೆ

ಜಿದ್ದಾ, ಮಾ.25: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಜಿದ್ದಾ ರೆನಲ್ ಅಧೀನದಲ್ಲಿರುವ ಕೆಸಿಎಫ್ ಮಕ್ಕತುಲ್ ಮುಕರ್ರಂ ಸೆಕ್ಟರ್‌ನ ವಾರ್ಷಿಕ ಮಹಾಸಭೆಯು ಗುರುವಾರ ರಾತ್ರಿ ಮಾಸಿಕ ಸ್ವಲಾತ್ ಮಜ್ಲಿಸ್‌ನೊಂದಿಗೆ ಕುದೈ ಏಷ್ಯನ್ ಪಾಲಿ ಕ್ಲಿನಿಕ್ ಹಾಲ್ನಲ್ಲಿ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಹನೀಫ್ ಸಖಾಫಿ ಬೊಳ್ಮಾರ್ ವಹಿಸಿದ್ದರು. ಈ ಸಂದರ್ಭ ಸುಲೈಮಾನ್ ಪಾದೆಕಲ್ಲುರವರ ವತಿಯಿಂದ ಉಮ್ರಾ ಮತ್ತು ಹಜಾಜ್‌ಗಳ ಸೇವೆಗಾಗಿ ಸೆಕ್ಟರ್ ಸಮಿತಿಗೆ ಗಾಲಿಕುರ್ಚಿಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು ಮೂಡಡ್ಕದ ಅಲ್ ಮದೀನತುಲ್ ಮುನವ್ವರದ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ಸಭೆಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಸಿಎಫ್ ದುಬೈ ರೆನ್ ಶಿಕ್ಷಣ ವಿಭಾಗದ ಕನ್ವೀನರ್ ಶರೀಫ್ ಹೊಸ್ಮಾರ್ ಪ್ರವಚನ ನೀಡಿದರು
ಸೌದಿ ಅರೇಬಿಯಾ ಡಿಕೆಎಸ್‌ಸಿ ಮುಖಂಡ ಅಬ್ಬಾಸ್ ಹಾಜಿ ಎಲಿಮಲೆ ಮಾತಾಡಿ ಶುಭ ಹಾರೈಸಿದರು.
‘ಜೀವನ ನಾಡಿಗಾಗಿ, ನಾಳೆಗಾಗಿ’ ಎಂಬ ವಿಚಾರದಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ನೇತಾರ ಇಸ್ಮಾಯೀಲ್ ಸಖಾಫಿ ಕಿನ್ಯ ಮಾತನಾಡಿದರು.
2015/16ನೆ ಸಾಲಿನ ವರದಿಯನನು ಪ್ರ.ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಹಾಗೂ ಲೆಕ್ಕಪತ್ರವನ್ನು ಕೋಶಾಧಿಕಾರಿ ಸುಲೈಮಾನ್ ಪಾದೆಕಲ್ಲು ಮಂಡಿಸಿದರು. ನಂತರ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ರೆನಲ್ ನೇತಾರರಾದ ಸೈಯದ್ ಅಬೂಬಕರ್ ಸಿದ್ದೀಕ್ ತಂಙಳ್ ಕೋಲ್ಪೆ ಹಾಗೂ ಸಿದ್ದೀಕ್ ಬಾಳೆಹೊನ್ನೂರು ಅವರು ಹಳೆಯ ಕಮಿಟಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚಿಸಿದರು.
2017-18ರ ಸಾಲಿನ ಪದಾಧಿಕಾರಿಗಳು
ಅಧ್ಯಕ್ಷ: ಹನೀಫ್ ಸಖಾಫಿ ಬೊಳ್ಮಾರ್
ಪ್ರ.ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ
ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್
ಶಿಕ್ಷಣ ವಿಭಾಗದ ಅಧ್ಯಕ್ಷ ಸುಲೈಮಾನ್ ಪಾದೆಕಲ್ಲು,
ಶಿಕ್ಷಣ ವಿಭಾಗ ಕಾರ್ಯದರ್ಶಿ ನಿಸಾರ್ ಕಾಟಿಪಲ್ಲ.
ಸಂಘಟನೆ ವಿಭಾಗದ ಅಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ
ಸಂಘಟನೆ ವಿಭಾಗದ ಕಾರ್ಯದರ್ಶಿ ಕಬೀರ್ ಬಾಜಾರ್
ಸಾಂತ್ವನ ವಿಭಾಗದ ಅಧ್ಯಕ್ಷ ಮೂಸಾ ಹಾಜಿ ಕಿನ್ಯ
ಸಾಂತ್ವನ ವಿಭಾಗ ಕಾರ್ಯದರ್ಶಿಮುಹಮ್ಮದ್ ಕುಟ್ಟಿ ಬಾಜಾರ್
ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷ ಇಸ್ಮಾಯೀಲ್ ಝುಹ್ರಿ ಕನ್ಯಾಡಿ
ಪಬ್ಲಿಷಿಂಗ್ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ನಾವೂರು.
ಕಚೇರಿ ವಿಭಾಗದ ಅಧ್ಯಕ್ಷ ಕಲಂದರ್ ಶಾಫಿ ಅಸೈಗೋಳಿ
ಕಾರ್ಯದರ್ಶಿ ಮುಸ್ತಾಕ್ ಅಹ್ಮದ್ ಸಾಗರ್ *ಕಾರ್ಯಕಾರಿ ಸಮಿತಿ ಸದಸ್ಯರು
ಉಸ್ಮಾನ್ ಸಅದಿ ನೆಲ್ಯಾಡಿ,
ಅಬ್ಬಾಸ್ ಹಾಜಿ ಎಲಿಮಲೆ
ಮುಹಮ್ಮದ್ ಸಅದಿ ಪರಪ್ಪು
ಅಕ್ಬರ್ ಅಲಿ ಮಾಚಾರ್
ಸಿದ್ದೀಕ್ ಸಅದಿ ಪೊಯ್ಯತ್ತಬೈಲ್
ಇಬ್ರಾಹೀಂ ಉಜಿರೆಬೆಟ್ಟು
ಅಬ್ಬಾಸ್ ಸಾಲ್ಮರ
ಅಶ್ರಫ್ ಮಂಜನಾಡಿ
ಮಜೀಬ್ ಹರೇಕಳ
ಅಬ್ದುಲ್ ಹಮೀದ್ ಮಂಜನಾಡಿ
ಅಶ್ರಫ್ ಮಂಗಿಲಪದವು
ಶರೀಫ್ ಪಲ್ಲಮಜಲು
ರಫೀಕ್ ಕೊಳಕೇರಿ
ರವೂಫ್ ಪೆರ್ನೆ
ಅಬ್ದುಲ್ ಹಮೀದ್ ಆನೆಕಲ್ಲು
ಮುಹಮ್ಮದ್ ತೆಕ್ಕಾರು.
ಜೊತೆ ಕಾರ್ಯದರ್ಶಿ ಕಲಂದರ್ ಶಾಫಿ ಅಸೈಗೋಳಿ ಸ್ವಾಗತಿಸಿದರು ನೂತನ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ವಂದಿಸಿದರು







