ರಸ್ತೆ ಅಪಘಾತ : ಕಂಬಳ ಓಟಗಾರ ಮೃತ್ಯು

ಮೂಡುಬಿದಿರೆ, ಮಾ.25: ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳುವಾಯಿ ಹೇನಬೆಟ್ಟು ನಿವಾಸಿ ರತ್ನಾಕರ ಆಚಾರ್ಯ(35) ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಂಬಳ ಓಟಗಾರರಾಗಿ ಕಳೆದ 20 ವರ್ಷಗಳಿಂದ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದ ಇವರು ಇಲ್ಲಿನ ದಿ.ಶೇಖರ್ ಆಚಾರ್ಯ ಅವರ ಪುತ್ರ. ನಾಲ್ಕು ದಿನಗಳ ಹಿಂದೆ ರತ್ನಾಕರ ಅವರು ಮೂಡುಬಿದಿರೆ ಪೇಟೆಯಲ್ಲಿರುವ ಅರಮನೆಬಾಗಿಲಿನಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿತ್ತು. ಅಪಘಾತದ ರಭಸಕ್ಕೆ ಬೈಕ್ ರತ್ನಾಕರ ಅವರ ಮೇಲೆ ಬಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
Next Story





