ಸ್ಮಿತ್ 20ನೇ ಟೆಸ್ಟ್ ಶತಕ

ಧರ್ಮಶಾಲಾ, ಮಾ.25: ಇಲ್ಲಿ ನಡೆಯುತ್ತಿರುವ ನಾಲ್ಕನೆ ಮತ್ತು ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ 20ನೇ ಶತಕ ದಾಖಲಿಸಿದ್ದಾರೆ.
ವಾರ್ನರ‍್ ಮತ್ತು ಸ್ಮಿತ್ ಎರಡನೆ ವಿಕೆಟ್ ಗೆ 144ರನ್‌ಗಳ ಜೊತೆಯಾಟ ನೀಡಿದರು.
ವಾರ್ನರ‍್ 56ರನ್ ಮತ್ತು ಸ್ಮಿತ್ 111 ರನ್ ಗಳಿಸಿ ಔಟಾದರು.
ಕುಲದೀಪ್ ಯಾದವ್ (3 ವಿಕೆಟ್) ಮತ್ತು ಉಮೇಶ್ ಯಾದವ್(2ವಿಕೆಟ್) ದಾಳಿಗೆ ಸಿಲುಕಿ ಆಸ್ಟ್ರೇಲಿಯ ಸಂಕಷ್ಟಕ್ಕೆ ಸಿಲುಕಿದರೂ ವಾರ್ನರ್ ಮತ್ತು ಸ್ಮಿತ್ ತಂಡವನ್ನು ಆಧರಿಸಿದರು. ಆಸ್ಟ್ರೇಲಿಯ ಮೊದಲ ಇನಿಂಗ್ಸ್ ನಲ್ಲಿ 61 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 208ರನ್ ಗಳಿಸಿದೆ.
Next Story





