ತಂಡದ ಸಹ ಆಟಗಾರರಿಗೆ ಕೊಹ್ಲಿಯಿಂದ ಪಾನೀಯ ಸರಬರಾಜು !

ಧರ್ಮಶಾಲಾ, ಮಾ.25: ಇಲ್ಲಿ ಇಂದು ಆರಂಭಗೊಂಡ ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಗಾಯದ ಕಾರಣಕ್ಕಾಗಿ ತಂಡದಿಂದ ಹೊರಗುಳಿದಿದ್ದರೂ, ಅವರು ಸುಮ್ಮನೆ ಕೈ ಕಟ್ಟಿ ಪಂದ್ಯ ವೀಕ್ಷಣೆ ಮಾಡುತ್ತಿಲ್ಲ. ತಂಡದ ಸಹ ಆಟಗಾರರಿಗೆ ನೆರವಾಗುತ್ತಿದ್ದಾರೆ.
ಕೊಹ್ಲಿ ಅವರು ಬಾಯಾರಿದ ತಂಡದ ಸಹ ಆಟಗಾರರಿಗೆ ನೀರು ಮತ್ತು ತಂಪು ಪಾನೀಯವನ್ನು ತಂದು ಕೊಡುವ ಮೂಲಕ ಕೊಹ್ಲಿ ಗಮನ ಸೆಳೆದರು.
ಕೊಹ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ನಿರತರಾಗಿದ್ದಾಗ ಬಿದ್ದು ಗಾಯಗೊಂಡಿಡ್ಡರು.ಈ ಕಾರಣದಿಂದಾಗಿ ಅಂತಿಮ ಟೆಸ್ಟ್ ನಲ್ಲಿ ಅಜಿಂಕ್ಯ ರಹಾನೆ ತಂಡವನ್ನು ನಾಯಕರಾಗಿ ಮುನ್ನೆಡೆಸುತ್ತಿದ್ದಾರೆ.
Next Story





