ಸಮಾಜವಾದಿ ಪಕ್ಷದ ಸೋಲಿನ ಅವಲೋಕನಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದ ಅಖಿಲೇಶ್

ವಿಧಾನಸಭಾ ಚುನಾವಣೆಯಲ್ಲಾದ ಹೀನಾಯ ಸೋಲಿನ ಕುರಿತು ಚರ್ಚಿಸಲು ಅಖಿಲೇಶ್ ಯಾದವ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆದಿದ್ದು, ಅದರಲ್ಲಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ಯಾದವ್ ಮತ್ತುಶಿವಪಾಲ್ ಯಾದವ್ ಭಾಗವಹಿಸಿಲ್ಲ. ಕಾರ್ಯಕಾರಿಣಿಯ ಅಧ್ಯಕ್ಷತೆಯನ್ನು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಹಿಸಿದ್ದರು.
ಸಭೆಯಲ್ಲಿ ಮುಲಾಯಂ ಸಿಂಗ್ ಮತ್ತು ಶಿವಪಾಲ್‌ಯಾದವ್‌ರ ನಿಕಟ ನಾಯಕರು ಕೂಡಾ ಕಾಣಿಸಿಕೊಂಡಿಲ್ಲ. ಪಕ್ಷ ನಾಯಕತ್ವ ಕುರಿತು ಮುಲಾಯಂ ಮತ್ತು ಅಖಿಲೇಶ್ ನಡುವೆ ಮಧ್ಯಸ್ಥಿಕೆ ವಹಿಸಿದ್ದ ಮಾಜಿ ಕ್ಯಾಬಿನೆಟ್ ಸಚಿವ ಅಝಂ ಖಾನ್‌ರು ಸಭೆಯಲ್ಲಿ ಭಾಗವಹಿಸಿರಲಿಲ್ಲ.
ರಾಷ್ಟ್ರೀಯ ಕಾರ್ಯಕಾರಿಣಿಸಭೆಯಲ್ಲಿ ಮುಲಾಯಂ ಸಿಂಗ್ ಭಾಗವಹಿಸುತ್ತಾರೆ ಎಂದು ಶುಕ್ರವಾರ ಸಮಾಜವಾದಿ ಪಕ್ಷದ ಕೆಲವು ಹಿರಿಯ ನಾಯಕರು ಹೇಳಿದ್ದರು. ಯಾಕೆಂದರೆ ಈಗ ಪಕ್ಷದಲ್ಲಿ ಯಾವುದೇ ರೀತಿಯ ಗಲಾಟೆ ಇಲ್ಲ ಎನ್ನುವುದು ಅವರ ಅಭಿಪ್ರಾಯ ಅಗಿತ್ತು. ಪ
ಕ್ಷದಲ್ಲಿ ಗುಂಪುಗಾರಿಕೆಯಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ ಎಂದು ಮುಲಾಯಂ ಸಿಂಗ್ ಕೆಲವು ನಾಯಕರಲ್ಲಿ ಹೇಳಿದ್ದರು ಎನ್ನಲಾಗಿದೆ.





