ಬಂಟಕಲ್: ವಿಶ್ವ ಜಲ ದಿನಾಚರಣೆ

ಶಿರ್ವ, ಮಾ.25: ಬಂಟಕಲ್‌ನ ಶ್ರೀಮಧ್ವವಾದಿರಾಜ ತಾಂತ್ರಿಕ ವಿದ್ಯಾ ಲಯದ ರಾಷ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರೋಟರ್ಯಾಕ್ಟ್ ಘಟಕ ಹಾಗೂ ಜೇಸಿಐ ಕಲ್ಯಾಣಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ದಿನವನ್ನು ಇತ್ತೀಚೆಗೆ ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಜೋಸೆಫ್ ಜಿ.ಎಂ.ರೆಬೆಲ್ಲೋ ಮಳೆ ನೀರಿನೊಂದಿಗೆ ಅನುಸಂಧಾನ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ರಾಷ್ರೀಯ ಸೇವಾ ಯೋಜನೆಯ ಸಂಯೋಜಕ ನಾಗರಾಜ್ ರಾವ್, ಜೆಸಿಐ ಕಲ್ಯಾಣಪುರದ ಕಾರ್ಯದರ್ಶಿ ನಿತ್ಯಾನಂದ ಕುಮಾರ್ ಉಪಸ್ಥಿತರಿದ್ದರು. ಜೆಸಿಐ ಕಲ್ಯಾಣಪುರದ ಅಧ್ಯಕ್ಷ ಪ್ರಶಾಂತ್ ಆಚಾರ್ಯ ಸ್ವಾಗತಿಸಿದರು. ಶ್ರೀರಕ್ಷ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story





