ಸುರತ್ಕಲ್‌ನಲ್ಲಿ 30 ಬೆಡ್‌ಗಳ ಆಸ್ಪತ್ರೆಗೆ ಮುಂದಿನ ತಿಂಗಳು ಶಿಲಾನ್ಯಾಸ: ಮೊಯ್ದಿನ್ ಬಾವ

ಮಂಗಳೂರು.ಮಾ,25:ಸುರತ್ಕಲ್‌ನಲ್ಲಿ 30 ಬೆಡ್‌ಗಳ ಆಸ್ಪತ್ರೆಗೆ ಬರುವ ತಿಂಗಳ ಕೊನೆಯಲ್ಲಿ ರಾಜ್ಯ ಆರೋಗ್ಯ ಸಚಿವರ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನವಮಂಗಳೂರು ಬಂದರು ಮಂಡಳಿಯ ಎಸ್‌ಎಫ್‌ಸಿ ಅನುದಾನ ಒಂದು ಕೋಟಿ ರೂ ಸಹಕಾರದೊಂದಿಗೆ ಆಸ್ಪತ್ರೆಯ ಕಾಮಗಾರಿ ಆರಂಭವಾಗಲಿದೆ.ಹೊಸ ಬೆಟ್ಟುವಿನ ರಾಷ್ಟ್ರೀಯ ಹೆದ್ದಾರಿಯ ಬಳಿಯ ಖಾಸಗಿ ಕಟ್ಟಡದಲ್ಲಿ ಆರ್‌ಟಿಓ ಕಚೇರಿ ಆರಂಭವಾಗಲಿದೆ. ಎಪ್ರಿಲ್ ಕೊನೆಯಲ್ಲಿ ಕಚೇರಿ ವಿದ್ಯುಕ್ತವಾಗಿ ಉದ್ಘಾಟನೆಯಾಗಲಿದೆ.ಸುರತ್ಕಲ್ ಬಳಿಯ ರಸ್ತೆ ಕಾಮಗಾರಿ 2.75 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.ಸುರತ್ಕಲ್‌ನ ಹಳೆ ಮಾರುಕಟ್ಟೆಯನ್ನು ಕೆಡವಿ ಸುರತ್ಕಲ್ ಮೈದಾನದಲ್ಲಿ ನೂತನ ಮಾರುಕಟ್ಟೆ ನಿರ್ಮಿಸಲಾಗುವುದು.ಈ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸಲಾಗಿದೆ. ಸುರತ್ಕಲ್‌ನ ಎಂಆರ್‌ಪಿಎಲ್ ವರೆಗಿನ ಆರು ಪಥಗಳ ರಸ್ತೆ ಕಾಮಗಾರಿಗಳನ್ನು 65 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಮೊಯ್ದಿನ್ ಬಾವ ತಿಳಿಸಿದರು.
ಸುರತ್ಕಲ್‌ನಲ್ಲಿ ಶ್ರೀನಿವಾಸ ಮಲ್ಯ ರಂಗ ಮಂದಿರವನ್ನು ಶ್ರೀಘ್ರವಾಗಿ ಪೂರ್ಣಗೊಳಿಸಲು ಸರಕಾರ ಕಳೆದ ವರ್ಷ ಒಂದು ಕೋಟಿ ಬಿಡುಗಡೆಮಾಡಿದ್ದು ಈ ಬಾರಿ ಮತ್ತೆ ಒಂದು ಕೋಟಿ ಬಿಡುಗಡೆಮಾಡಲಾಗಿದೆ.ಒಟ್ಟು ಎರಡು ಕೋಟಿ ಬಿಡುಗಡೆ ಮಾಡಲಾಗಿದೆ ಅದನ್ನು ಶ್ರೀಘ್ರವಾಗಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದು ಮೊಯ್ದಿನ್ ಬಾವ ತಿಳಿಸಿದರು.ಸುರತ್ಕಲ್‌ನಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಬಸ್ ತಂಗುದಾಣವನ್ನು ನಿರ್ಮಿಸಲಾಗುವುದು .ಮುಂದಿನ ತಿಂಗಳು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.ಮಳೆಗಾಲದ ಒಳಗೆ ಇದರ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ಧೇಶ ಹೊಂದಲಾಗಿದೆ ಎಂದು ಮೊಯ್ದಿನ್ ಬಾವ ತಿಳಿಸಿದರು.







