ಪರೀಕ್ಷೆಯ ಭಯ: ಬಾಲಕಿ ಆತ್ಮಹತ್ಯೆಗೆ ಯತ್ನ
ಹೊಸದಿಲ್ಲಿ, ಮಾ.25: ವಾಯುವ್ಯ ದಿಲ್ಲಿಯ ಭರತ್ ನಗರ ಪ್ರದೇಶದಲ್ಲಿ ಒಂಬತ್ತರ ಹರೆಯದ ಬಾಲಕಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಪರೀಕ್ಷೆಯ ಭಯದಿಂದ ಬಾಲಕಿ ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಶಂಕಿಸಲಾಗಿದೆ. ಮಾರ್ಚ್ 21ರಂದು ಮನೆಯಲ್ಲಿ ಬಾಲಕಿ ಮತ್ತು ಆಕೆಯ ಸಹೋದರ ಮಾತ್ರ ಇದ್ದರು. ಈ ವೇಳೆ ಬಟ್ಟೆ ಬದಲಿಸುವ ಕಾರಣ ನೀಡಿ ತನ್ನ ಸಹೋದರನನ್ನು ಕೋಣೆಯಿಂದ ಹೊರಗೆ ಕಳಿಸಿದ್ದ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆಕೆ ಎಷ್ಟು ಹೊತ್ತಾದರೂ ಕೋಣೆಯಿಂದ ಹೊರಬಾರದ್ದನ್ನು ಗಮನಿಸಿದ ಸಹೋದರ ನೆರೆ ಮನೆಯವರಿಗೆ ವಿಷಯ ತಿಳಿಸಿದ್ದು ಅವರು ಬಾಲಕಿಯನ್ನು ರಕ್ಷಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





