ಮುಲಾಯಂ, ಶಿವಪಾಲ್ ಗೈರು: ಅಖಿಲೇಶ್ ನೇತೃತ್ವದಲ್ಲಿ ಪಕ್ಷದ ಸಭೆ
ಲಕ್ನೊ, ಮಾ.25: ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್, ಅವರ ಸೋದರ ಶಿವಪಾಲ್ ಯಾದವ್ ಮತ್ತು ಹಿರಿಯ ಮುಖಂಡ ಅಝಂ ಖಾನ್ ಗೈರುಹಾಜರಿಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಇಂದಿಲ್ಲಿ ನಡೆಯಿತು. ಮಾಜಿ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಅಖಿಲೇಶ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಅಧಿಕೃತ ಸರಕಾರಿ ನಿವೇಶ ಪ್ರವೇಶಿಸುವ ಮೊದಲು ಏಳು ಮಂದಿ ಧಾರ್ಮಿಕ ಮುಖಂಡರು ಕಚೇರಿಯನ್ನು ಶುಚಿಗೊಳಿಸಿದ ಬಗ್ಗೆ ಪ್ರಸ್ತಾವಿಸಿದ ಅಖಿಲೇಶ್, ಕಚೇರಿ ಶುಚಿಗೊಳಿಸುವ ಭರದಲ್ಲಿ ಅಲ್ಲಿ ಹಲವಾರು ವರ್ಷಗಳಿಂದ ಅಡ್ಡಾಡುತ್ತಿರುವ ನವಿಲುಗಳನ್ನು ಅವರು ಓಡಿಸದಿರಲಿ ಎಂದು ನಾನು ಆಶಿಸುತ್ತೇನೆ ಎಂದರು. ಉತ್ತರಪ್ರದೇಶದಲ್ಲಿ ನೂತನವಾಗಿ ರೋಮಿಯೋ ನಿಗ್ರಹ ದಳ ರಚಿಸಲು ಸಿದ್ಧರಾಗಿರುವ ಮುಖ್ಯಮಂತ್ರಿಯನ್ನು ಅವರು ಟೀಕಿಸಿದರು.
Next Story