ಮಾ.29: ಜನೌಷಧಿ ಕೇಂದ್ರ ಉದ್ಘಾಟನೆ
ಪುತ್ತೂರು, ಮಾ.25: ಜೆನೆರಿಕ್ ಔಷಧಿಗಳನ್ನು ವಿತರಿಸುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವು ಪುತ್ತೂರಿನ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಮಾ.29ರಂದು ಲೋಕಾರ್ಪಣೆಯಾಗಲಿದೆ ಎಂದು ಜನೌಷಧಿ ವಿಭಾಗದ ಸಂಚಾಲಕ ಪ್ರೊ.ಬಿ.ಜೆ.ಸುವರ್ಣ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಕೇಂದ್ರ ಸರಕಾರದ ರಾಸಾಯನಿಕ ಮತ್ತು ಗೊಬ್ಬರ ಸಚಿವಾಲಯದ ಕಾರ್ಯ ವ್ಯಾಪ್ತಿಯ ಈ ಯೋಜನೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಅನುಷ್ಠಾನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಆಸ್ಕರ್ ಆನಂದ್, ಕಾರ್ಯದರ್ಶಿ ಎ.ಜೆ. ರೈ, ಸದಸ್ಯರಾದ ಎನ್.ಕೆ.ಜಗನ್ನಿವಾಸ್ ರಾವ್, ಜನೌಷಧಿ ಕೇಂದ್ರದ ಮೇಲ್ವಿಚಾರಕ ರಾಮಕೃಷ್ಣ ಉಪಸ್ಥಿತರಿದ್ದರು.
Next Story





