ಸುದ್ದಿ ಮಾಧ್ಯಮದಿಂದ ಸ್ವಚ್ಛತಾ ಆಂದೋಲನ,
ಮಂಗಳೂರು, ಮಾ.25: ಸುದ್ದಿ ಮಾಧ್ಯಮ ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ಇತರೆ ಸಂಘ ಸಂಸ್ಥೆಗಳೊಂದಿಗೆ ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ಪ್ರತೀ ಗ್ರಾಮಗಳಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಸಂಪಾದಕ ಡಾ.ಯು.ಪಿ.ಶಿವಾನಂದ ತಿಳಿಸಿದರು.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದ್ದಿ ಪತ್ರಿಕೆ ಮತ್ತು ಸಿಬ್ಬಂದಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಮ್ಮಿಕೊಂಡ ಅಪಪ್ರಚಾರ, ಅವಹೇಳನ ಮತ್ತು ಬ್ಲಾಕ್‌ಮೇಲ್ ವಿರುದ್ಧ ಸಂಸ್ಥೆ ನಡೆದುಕೊಂಡ ನಿಲುವನ್ನು ಜನತೆ ಸ್ವಾಗತಿಸಿ, ಪತ್ರಿಕೆಯನ್ನು ಬೆಂಬಲಿಸಿದ್ದಾರೆ. ಅಪಪ್ರಚಾರದಂತಹ ನಡೆಗಳ ವಿರುದ್ಧ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಯಾಗಬೇಕೆಂಬ ಉದ್ದೇಶದಿಂದ ಸ್ವಚ್ಛತಾ ಆಂದೋಲನದ ಮೂಲಕ ಜಾಗೃತಿ ಮತ್ತು ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಿ ಅಪಪ್ರಚಾರ ತಡೆಗಟ್ಟುವ ಕಾರ್ಯಕ್ರಮವಾಗಲಿದೆ ಎಂದರು. ಜಾಲತಾಣಗಳಲ್ಲಿನ ಬ್ಲಾಕ್‌ಮೇಲ್‌ನಂತಹ ಪ್ರಕರಣಗಳು ಎಲ್ಲಾ ಮಾಧ್ಯಮಗಳಿಗೂ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ತೊಂದರೆ ಮತ್ತು ಅಪಾಯಕಾರಿಯಾದುದು. ಈ ಬಗ್ಗೆ ಪತ್ರಕರ್ತರ ಸಂಘಟನೆಯ ಸಭೆಗಳಲ್ಲಿ ಗಮನಸೆಳೆದು ಎಲ್ಲಾ ಮಾಧ್ಯಮಗಳು ನಿಲುವುದೊಂದನ್ನು ತಳೆಯುವ ಬಗ್ಗೆ ಆಗ್ರಹಿಸಲಾಗುವುದು ಎಂದು ರಾಜ್ಯಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ಹರೀಶ್ ಬಂಟ್ವಾಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ್ ಕುಮಾರ್ ಪುತ್ತೂರು ಹಾಗೂ ಭಾಸ್ಕರ ರೈ ಎಣ್ಮೂರು ಉಪಸ್ಥಿತರಿದ್ದರು.





