ಕೆರೆಕಾಡಿನ ಯುವಕ ಸೌದಿಯಲ್ಲಿ ಮೃತ್ಯು

ಮಂಗಳೂರು, ಮಾ.26: ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಕೆರೆಕಾಡಿನ ಯುವಕನೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ಪಡುಪಣಂಬೂರು ಗ್ರಾಮದ ಬೆಳ್ಳಾಯರು ಕೆರೆಕಾಡಿನ ನಿವಾಸಿ ಜೀವನ್(28) ಎಂದು ಗುರುತಿಸಲಾಗಿದೆ.
ಕಳೆದ ಮೂರು ತಿಂಗಳಿನ ಹಿಂದೆಯಷ್ಟೇ ಊರಿಗೆ ಬಂದು ಮತ್ತೆ ತೆರಳಿದ್ದರು ಎಂದು ತಿಳಿದುಬಂದಿದೆ.
ನಾಲ್ಕು ದಿನಗಳೊಳಗೆ ಪಾರ್ಥಿವ ಶರೀರವು ಊರಿಗೆ ತಲುಪುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





