ರಾಕ್ಲೈನ್ ಸಿನಿಮಾ ಕ್ಷೇತ್ರದ ಮಿನುಗುವ ನಕ್ಷತ್ರ: ಚಂದ್ರಶೇಖರ ಸ್ವಾಮೀಜಿ
 - Copy.jpg)
ಬೆಂಗಳೂರು, ಮಾ.26: ಕಲಾವಿದನಾಗಿ ಬೆಳೆದು, ಸಿನಿಮಾರಂಗದ ಎಲ್ಲಾ ಮಜಲುಗಳಲ್ಲಿ ತೊಡಗಿಸಿಕೊಂಡಿರುವ ಸಹೃದಯಿ ಧೀರ ರಾಕ್ಲೈನ್ ವೆಂಕಟೇಶ್ ಅವರು ಸಿನಿಮಾ ಕ್ಷೇತ್ರದ ಮಿನುಗುವ ನಕ್ಷತ್ರವಾಗಿದ್ದಾರೆ. ಅವರು ಇನ್ನಷ್ಟು ಸಾಧನೆಯ ಮೂಲಕ ಮಿಂಚಲಿ ಎಂದು ವಾಸ್ತುತಜ್ಞ ಚಂದ್ರಶೇಖರ ಸ್ವಾಮೀಜಿ ಹಾರೈಸಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಧೀರ ರಾಕ್ ಲೈನ್ ವೆಂಕಟೇಶ್ ಅವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಚಂದ್ರಶೇಖರ ಸ್ವಾಮೀಜಿಯವರ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮೀಜಿ ಆರ್ಶೀವಚನ ಪಡೆದರು.
ಇಂದಿನ ದಿನಗಳಲ್ಲಿ ಉತ್ತಮ ಸಾಮಾಜಿಕ ಸಂದೇಶ ಹಾಗೂ ಪೌರಾಣಿಕ ಕಥಾವಸ್ತುಗಳುಳ್ಳ ಸಿನಿಮಾಗಳು ವಿರಳವಾಗುತ್ತಿವೆ. ಸಮಾಜವನ್ನು ತಿದ್ದುವ ಹಾಗೂ ಜನಸಾಮಾನ್ಯರ ಬದುಕಿನಲ್ಲಿ ಸಿನಿಮಾ ಒಂದು ಭಾಗವಾಗಿರುವುದರಿಂದ ಈ ಬಗ್ಗೆ ಸಮಾನ ಮನಸ್ಕರು ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದವರು ನುಡಿದರು.
ಈ ಸಂದರ್ಭ ಮಾತನಾಡಿದ ವೆಂಕಟೇಶ್, ನನ್ನೆಲ್ಲ ಸಾಧನೆಯ ಹಿಂದೆ ಚಂದ್ರಶೇಖರ ಸ್ವಾಮೀಜಿಯವರ ಮಾರ್ಗದರ್ಶನ ಇದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಮಂಜುನಾಥ ಹೆಗ್ಡೆ, ಉಡುಪಿಯ ಸಾದಿಕ್ ಅಹ್ಮದ್, ಸಮಾಜ ಸೇವಕ ಗಿರೀಶ್ ಕಾಮತ್ ಮುಲ್ಕಿ, ಆಶ್ರಮದ ಆಡಳಿತ ನಿರ್ದೇಶಕಿ ರಜನಿ ಸಿ. ಭಟ್, ಸಂಚಾಲಕ ರಾಜೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.







