ಅಂತಿಮ ಟೆಸ್ಟ್: ಭಾರತ ಮೊದಲ ಇನಿಂಗ್ಸ್ 248/6(91ಓವರ್)

ಧರ್ಮಶಾಲಾ, ಮಾ.26: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ನ ಎರಡನೆ ದಿನವಾಗಿರುವ ಇಂದು ಭಾರತ ಮೊದಲ ಇನಿಂಗ್ಸ್‌ನಲ್ಲಿ 91 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 248 ರನ್ ಗಳಿಸಿದೆ.
ಆಸ್ಟ್ರೇಲಿಯದ ಸ್ಕೋರ್‌ನ್ನು ಸರಿಗಟ್ಟಲು ಇನ್ನೂ 52 ರನ್ ಗಳಿಸಬೇಕಾಗಿದೆ. ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 300 ರನ್‌ಗಳಿಗೆ ಆಲೌಟಾಗಿತ್ತು.
ಎರಡನೆ ದಿನದಾಟ ನಿಂತಾಗ ಭಾರತದ ವಿಕೆಟ್ ಕೀಪರ್ ವೃದ್ದಿಮಾನ್ ಸಹಾ (10) ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ (16) ಔಟಾಗದೆ ಕ್ರೀಸ್‌ನಲ್ಲಿದ್ದರು.
ಭಾರತದ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ (60), ಚೇತೇಶ್ವರ ಪೂಜಾರ (57) ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಮುರಳಿ ವಿಜಯ್(11), ಅಜಿಂಕ್ಯ ರಹಾನೆ(46), ಆರ್.ಅಶ್ವಿನ್ (30) ಎರಡಂಕೆಯ ಕೊಡುಗೆ ನೀಡಿದರು.
ಕರ್ನಾಟಕದ ಕರುಣ್ ನಾಯರ್(5) ಮತ್ತೊಮ್ಮೆ ವಿಫಲರಾದರು.
.
.
Next Story





