ಅಕ್ರಮ ಆಸ್ತಿ ಪ್ರಕರಣ: ಬಿಹಾರದ ಮಾಜಿ ಅಧಿಕಾರಿಯ ಆಸ್ತಿ ಮುಟ್ಟುಗೋಲಿಗೆ ಸೂಚನೆ

ಪಾಟ್ನಾ, ಮಾ.26: ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ಪ್ರಕರಣದಲ್ಲಿ, ಪಾಟ್ನಾ ಹೈಕೋರ್ಟ್ ಸೂಚನೆಯಂತೆ ಬಿಹಾರದ ಮಾಜಿ ತೂಕ ಮತ್ತು ಅಳತೆ ಇನ್‌ಸ್ಪೆಕ್ಟರ್‌ಗೆ ಸೇರಿದ 30 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾಗೃತಿ ಇಲಾಖೆಯು ಸಜ್ಜಾಗಿದೆ.
ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಮುಝಫರ್‌ಪುರ ಜಾಗೃತಿ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಬೇಕೆಂದು ಕೋರಿ (ಇದೀಗ ಆಮಾನತುಗೊಂಡಿರುವ) ಇನ್‌ಸ್ಪೆಕ್ಟರ್ ಓಂಪ್ರಕಾಶ್ ಸಿಂಗ್ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿತು.
ಪಟ್ನಾದ ಲಾಲ್ಜಿ ತೋಲಾ ಪ್ರದೇಶದಲ್ಲಿ ಆರು ಮಹಡಿಯ ಕಟ್ಟಡ ಅಲ್ಲದೆ ಪಾಟ್ನಾದ ಸುತ್ತಮುತ್ತ 40 ನಿವೇಶನಗಳನ್ನು ಓಂಪ್ರಕಾಶ್ ಸಿಂಗ್ ಹೊಂದಿದ್ದು ಇವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಲಾಗಿದೆ.
ಕೃಷಿ ಇಲಾಖೆಯಲ್ಲಿ ಗುಮಾಸ್ತನಾಗಿದ್ದ ಓಂಪ್ರಕಾಶ್ ಸಿಂಗ್ ಆ ಬಳಿಕ ತೂಕ ಮತ್ತು ಅಳತೆ ಇಲಾಖೆಯ ಇನ್‌ಸ್ಪೆಕ್ಟರ್ ಆಗಿ ನಿಯುಕ್ತಿಗೊಂಡಿದ್ದ. ಅಕ್ರಮ ಆಸ್ತಿಯ ದೂರಿನ ಹಿನ್ನೆಲೆಯಲ್ಲಿ 2009ರಲ್ಲಿ ಈತನ ಮನೆ ಮೇಲೆ ಜಾಗೃತಿ ಇಲಾಖೆ ದಾಳಿ ನಡೆಸಿದಾಗ 20 ಲಕ್ಷ ರೂ. ನಗದು, ವಿವಿಧ ಬಾಂಡ್‌ಗಳಲ್ಲಿ ಹೂಡಲಾಗಿದ್ದ 7.43 ಲಕ್ಷ ರೂ. ಸಂಪತ್ತು ಮತ್ತು ಅಪಾರ ಪ್ರಮಾಣದ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿತ್ತು.







