ಶಾಸಕ ಮೊಯ್ದಿನ್ ಬಾವರಿಗೆ ಹೊಸ ವಿಲಾಸಿ ಕಾರು

ಮಂಗಳೂರು, ಮಾ.25: ಶಾಸಕ ಮೊಯ್ದಿನ್ ಬಾವ ಅವರು ಹೊಸ ವಿಲಾಸಿ ಕಾರೊಂದನ್ನು ಖರೀದಿಸಿದ್ದಾರೆ. ಪೆಟ್ರೋಲ್ ಹಾಗೂ ಬ್ಯಾಟರಿಯಿಂದ ಚಾಲನೆಗೊಳ್ಳುವ ಪರಿಸರ ಸ್ನೇಹಿಯಾಗಿರುವ ವೋಲ್ವೊ ಎಕ್ಸ್‌ಸಿ 90ಸಿ8 ಎಕ್ಸಲೆಂಟ್ ಹೈಬ್ರೀಡ್ ಕಾರು ಭಾರತದಲ್ಲಿ ಪ್ರಥಮ ಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.
ಮೊಯ್ದಿನ್ ಬಾವ ಪ್ರಥಮ ಗ್ರಾಹಕರಾಗಿ ಈ ಕಾರನ್ನು ಮಂಗಳೂರಿನಲ್ಲಿ ಖರೀದಿಸಿದ್ದಾರೆ ಎಂದು ಬೆಂಗಳೂರು ರೇಸ್‌ಕೋರ್ಸ್ ಬಳಿಯ ಇರುವ ಮಾರ್ಷಲ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಪ್ರತಿನಿಧಿ ಪತ್ರಿಕೆಗೆ ತಿಳಿಸಿದ್ದಾರೆ.
30ರಿಂದ 40 ಕಿ.ಮೀ. ಮೈಲೇಜ್ ನೀಡುವ ಈ ಕಾರು ಕಡಿಮೆ ಇಂಧನ ಕ್ಷಮತೆಯನ್ನು ಹೊಂದಿದೆ. ಪರಿಸರ ಮಾಲಿನ್ಯ ಪ್ರಮಾಣ ಕಡಿಮೆ ಇರುವ ಕಾರಣ ಇದೊಂದು ಪರಿಸರಸ್ನೇಹಿ ಕಾರು ಆಗಿದ್ದು, 5-6 ಕೋ.ರೂ. ಬೆಳೆ ಬಾಳುವ ಕಾರುಗಳಲ್ಲಿ ಹೊಂದಿರುವ ವಿಶೇಷ ಸೌಲಭ್ಯಗಳನ್ನು ಈ ಹೈಬ್ರೀಡ್ ಕಾರು ಹೊಂದಿದ್ದು ಆನ್‌ರೋಡ್ ಈ ಕಾರಿನ ಬೆಲೆ ರೂ 1.65 ಕೋ.ರೂ. ಎಂದು ಕಂಪೆನಿ ಪ್ರತಿನಿಧಿಯು ಪತ್ರಿಕೆಗೆ ತಿಳಿಸಿದ್ದಾರೆ.
ಮೊಯ್ದಿನ್ ಬಾವ ಅವರು ನೂತನ ಕಾರಿನೊಂದಿರುವ ಪೋಸ್ಟ್ ವೊಂದನ್ನು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಶೇರ್ ಮಾಡಿದ್ದಾರೆ.







