Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಟಿಪಳ್ಳ ಮಸೀದಿ ಆಡಳಿತ ಸಮಿತಿಗೆ...

ಕಾಟಿಪಳ್ಳ ಮಸೀದಿ ಆಡಳಿತ ಸಮಿತಿಗೆ ಚುನಾವಣೆ: ಫಲಿತಾಂಶ ಪ್ರಕಟ

ಸುರತ್ಕಲ್ ಪೊಲೀಸ್ ರಿಂದ ಬಿಗಿ ಭದ್ರತೆ

ವಾರ್ತಾಭಾರತಿವಾರ್ತಾಭಾರತಿ26 March 2017 10:23 PM IST
share
ಕಾಟಿಪಳ್ಳ ಮಸೀದಿ ಆಡಳಿತ ಸಮಿತಿಗೆ ಚುನಾವಣೆ: ಫಲಿತಾಂಶ ಪ್ರಕಟ

ಸುರತ್ಕಲ್, ಮಾ.26: ಪಣಂಬೂರು ಮುಸ್ಲಿಮ್ ಜಮಾಅತ್ (ರಿ) ಕಾಟಿಪಳ್ಳ ಇದರ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಮದ್ರಸ ಸಮಿತಿಗೆ 2017-19ನೆ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗೆ ರವಿವಾರ ಕಾಟಿಪಳ್ಳ ನೂರುಲ್ ಹುದಾ ಶಾಲೆಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.

ಪಣಂಬೂರು ಮುಸ್ಲಿಮ್ ಜಮಾಅತ್(ರಿ) ಕಾಟಿಪಳ್ಳ ಆಡಳಿತ ಸಮಿತಿ 21 ಸದಸ್ಯರ ಬಲಾಬಲ ಹೊಂದಿದೆ. ಚುನಾವಣೆಯಲ್ಲಿ ಕಳೆದ ಬಾರಿಯ ಆಡಳಿತ ಸಮಿತಿಯ 21 ಅಭ್ಯರ್ಥಿಗಳು, ಇನ್ನೊಂದು ತಂಡದ 21 ಅಭ್ಯರ್ಥಿಗಳು ಮತ್ತು ಇತರ ಇಬ್ಬರು ಅಭ್ಯರ್ಥಿಗಳು ಸೇರಿ ಒಟ್ಟು 44 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಚುನಾವಣೆಯಲ್ಲಿ ಒಟ್ಟು 716 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಪ್ರತಿಯೊಬ್ಬ ಮತದಾರ 21 ಮತಗಳನ್ನು ಚಲಾಯಿಸುವ ಅಧಿಕಾರಿ ಪಡೆದಿದ್ದಾರೆ. ಪ್ರತೀ ಬ್ಯಾಲೆಟ್ ಪೇಪರ್‌ನಲ್ಲಿ ಕಣದಲ್ಲಿರುವ ಒಟ್ಟು 44 ಮಂದಿಯ ಹೆಸರುಗಳನ್ನು ಸಮ್ಮಿಶ್ರ ಮಾಡಿ ಸೂಚಿಸಲಾಗಿದ್ದು, ಮತದಾರರು ತನ್ನ ಆಯ್ಕೆಯ ವ್ಯಕ್ತಿಗೆ ಮತಚಲಾಯಿಸಿದರು.

ಮುಖ್ಯ ಚುನಾವಣಾಧಿಕಾರಿಯಾಗಿ ವಕ್ಫ್ ಬೋರ್ಡ್‌ನ ಲೆಕ್ಕಪರಿಶೋಧನಾ ವಿಭಾಗದ ಅಧಿಕಾರಿ ನಝೀರ್ ಅಹ್ಮದ್, ಸಹಾಯಕ ಚುನಾವಣಾಧಿಕಾರಿಗಳಾಗಿ ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಮುಹಮ್ಮದ್, ವಕ್ಫ್ ಅಧಿಕಾರಿ ಅಬೂಬಕರ್ ಕಾರ್ಯನಿರ್ವಹಿಸಿದರು.

ಬಿಗಿಭದ್ರತೆ:

ಮತದಾನದ ಹಿನ್ನೆಲೆಯಲ್ಲಿ ಮತದಾನ ನಡೆಯುತ್ತಿರುವ ಕಾಟಿಪಳ್ಳ ನೂರುಲ್ ಹುದಾ ಶಾಲೆಯ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಸುರತ್ಕಲ್ ವೃತ್ತ ನಿರೀಕ್ಷ ಚೆಲುವರಾಜ್ ನೇತೃತ್ವದಲ್ಲಿ ಒಂದು ಪೊಲೀಸ್ ತುಕಡಿ ಸಹಿತ ಸುರತ್ಕಲ್ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಫಲಿತಾಂಶ ಪ್ರಕಟ: 
 ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, 2015-17 ಸಾಲಿನ ಆಡಳಿತ ಸಮಿತಿಯ 20 ಸದಸ್ಯರ ಸಹಿತ 21 ಮಂದಿ ನೂತನವಾಗಿ ಆಯ್ಕೆಗೊಂಡಿದ್ದಾರೆ.

ವಿಜೇತ ಅಭ್ಯರ್ಥಿಗಳು ಮತ್ತು ಅವರು ಗಳಿಸಿದ ಮತಗಳು:
 ಅಬೂಬಕರ್ (ಅಂಗಡಿ)292, ಪಿ.ಕೆ. ಅಬ್ದುಲ್ ರಝಾಕ್ 290, ಅಬೂಬಕರ್ (ಅಬ್ಬು) 284, ಅಬ್ದುಲ್ ರಶೀದ್ 281, ಅಹ್ಮದ್ ಬಾವಾ(ಎನ್‌ಎಂಪಿಟಿ)280 , ಇಕ್ಬಾಲ್ 277, ಅಯ್ಯೂಬ್ ಅಹ್ಮದ್ 272, ತಮ್ಮೀಮ್ 271, ಎಂ.ಕೆ. ಇಬ್ರಾಹೀಂ 270, ಪಿ.ಎಂ. ಅಹ್ಮದ್ 268, ದಾವುದ್ 266, ಮುಮ್ಮದ್ ಶಾಫಿ 265, ಮುಹಮ್ಮದ್ ಶರೀಫ್ 264, ಟಿ.ಎಸ್. ಮುಹಮ್ಮದ್ 262, ಮುಸ್ತಫಾ (ಎಂ)262, ಮುಸ್ತಫಾ 258, ಶಂಸುದ್ದೀನ್ 258, ಹಸನ್ ಶರೀಫ್ 257, ಶರೀಫ್ 255, ಅಬ್ದುಲ್ ಅಝೀಝ್(ಚಂದಾ) 244, ಶಬೀರುದ್ದೀನ್ 242 ಮತಗಳನ್ನು ಗಳಿಸುವ ಮೂಲಕ 2017-19 ಸಾಲಿನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ ಎಂದು ಮುಖ್ಯ ಚುನಾವಣಾಧಿಕಾರಿಯಾಗಿ ವಕ್ಫ್ ಬೋರ್ಡ್‌ನ ಲೆಕ್ಕ ಪರಿಶೋಧನಾ ವಿಭಾಗದ ಅಧಿಕಾರಿ ನಝೀರ್ ಅಹ್ಮದ್ ತಿಳಿಸಿದ್ದಾರೆ.

ಚುನಾವಣೆಯ ವೇಳೆ ಸಹಾಯಕ ಚುನಾವಣಾಧಿಕಾರಿಗಳಾಗಿ ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಮುಹಮ್ಮದ್, ವಕ್ಫ್ ಅಧಿಕಾರಿ ಅಬೂಬಕರ್ ಕಾರ್ಯನಿರ್ವಹಿಸಿದ್ದರು. ಕಬೀರ್ ಕಾಟಿಪಳ್ಳ ಸಹಕರಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X