ರೈಲಿನಡಿಗೆ ಬಿದ್ದು ಅಪರಿಚಿತ ಮೃತ್ಯು

ಉಡುಪಿ, ಮಾ.26: ಅಪರಿಚಿತ ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಮಾರ್ಪಳ್ಳಿ ಸಮೀಪ ಮಾ.26ರಂದು ಸಂಜೆ ವೇಳೆ ನಡೆದಿದೆ.
45-50ವರ್ಷ ಪ್ರಾಯದ ವ್ಯಕ್ತಿಯ ಮೃತದೇಹವು ರೈಲ್ವೆ ಹಳಿಯ ಮಧ್ಯೆ ಪತ್ತೆಯಾಗಿದ್ದು, ಅವರ ಬ್ಯಾಗಿನಲ್ಲಿ ಸಿಕ್ಕಿದ ಮಿತ್ರ ಆಸ್ಪತ್ರೆಯ ಚೀಟಿಯಲ್ಲಿ ನಾಗೇಶ್ ರಾವ್(45) ಎಂದು ನಮೂದಿಸಲಾಗಿತ್ತು. 2016ರ ಆಗಸ್ಟ್‌ನಲ್ಲಿ ಮಾನಸಿಕ ಕಾಯಿಲೆಗಾಗಿ ಅವರು ಚಿಕಿತ್ಸೆ ಪಡೆದುಕೊಂಡಿದ್ದರು. ಇವರು ಇದೇ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಇವರು ಧರಿಸಿದ ಶರ್ಟ್‌ನಲ್ಲಿ ಸ್ವಸ್ತಿಕ್ ಟೈಲರ್ ಶಿರ್ತಾಡಿ ಎಂಬುದಾಗಿ ಬರೆಯಲಾಗಿದೆ. ಬಲಗೈಯಲ್ಲಿ ಅಯ್ಯಪ್ಪ ದೇವರ ಹಚ್ಚೆ ಇದೆ. ಆಕಾಶ ನೀಲಿ ಬಣ್ಣದ ಉದ್ದ ಚೆಕ್ಸ್‌ನ ಶರ್ಟ್ ಮತ್ತು ಖಾಕಿ ಮಾಸಿದ ಬಣ್ಣದ ಪ್ಯಾಂಟ್ ಧರಿಸಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





