ಮನಪಾ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ

ಮಂಗಳೂರು, ಮಾ.26: ಮಂಗಳೂರು ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ನಡೆಯಿತು.
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಬ್ದುರ್ರವೂಫ್, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ನಾಗವೇಣಿ, ತೆರಿಗೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪ್ರತಿಭಾ ಕುಳಾಯಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಬಿತಾ ಮಿಸ್ಕಿತ್ ಆಯ್ಕೆಯಾಗಿದ್ದಾರೆ.
ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರಾಗಿ ಪ್ರವೀಣ್ ಆಳ್ವ, ತಿಲಕರಾಜ್, ಅಶೋಕ್ ಶೆಟ್ಟಿ, ಮುಹಮ್ಮದ್, ಹರೀಶ್ ಶೆಟ್ಟಿ, ಕವಿತಾ ವಾಸು, ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾಗಿ ದೀಪಕ್ ಪೂಜಾರಿ, ಅಪ್ಪಿ, ಎ.ಸಿ.ವಿನಯರಾಜ್, ಆಶಾ ಡಿಸಿಲ್ವಾ, ಜಯಂತಿ ಆಚಾರ್, ಗುಣಶೇಖರ ಶೆಟ್ಟಿ, ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾಗಿ ಪ್ರಕಾಶ್ ಬಿ. ಸಾಲ್ಯಾನ್, ಬಶೀರ್ ಅಹ್ಮದ್, ರಾಧಾಕೃಷ್ಣ, ಜುಬೈದಾ, ಮೀರಾ ಕರ್ಕೇರ, ಸುಧೀರ್ ಶೆಟ್ಟಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರಾಗಿ ಪ್ರಕಾಶ್, ಶೈಲಜಾ, ರತಿಕಲಾ, ಸುಮಯ್ಯಾ, ದಿವಾಕರ್, ಹೇಮಲತಾ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಉಪಮೇಯರ್ ರಜನೀಶ್ ಕಾಪಿಕಾಡ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಪ್ರತಿಪಕ್ಷ ಬಿಜೆಪಿ ನಾಯಕಿ ರೂಪಾ ಡಿ.ಬಂಗೇರಾ ಉಪಸ್ಥಿತರಿದ್ದರು.
ಪ್ರತಿಪಕ್ಷ ನಾಯಕರಾಗಿ ಗಣೇಶ್ ಹೊಸಬೆಟ್ಟು:
ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕರಾಗಿ ಗಣೇಶ್ ಹೊಸಬೆಟ್ಟು ಆಯ್ಕೆಯಾಗಿದ್ದಾರೆ. ಶನಿವಾರ ಪಾಲಿಕೆಯ ಬಿಜೆಪಿ ಸದಸ್ಯರ ಸಭೆಯಲ್ಲಿ ಕುಳಾಯಿ ವಾರ್ಡ್ ಪ್ರತಿನಿಧಿಸುವ ಗಣೇಶ್ ಹೊಸಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು. ಇವರು ಈ ಹಿಂದೆ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು.







