ನೀರಿನ ಮಿತ ಬಳಕೆಗೆ ಮೇಯರ್ ಕರೆ

ಮಂಗಳೂರು, ಮಾ.26: ನಗರದಲ್ಲಿ ನೀರಿನ ಸಮಸ್ಯೆ ಉದ್ಘವಿಸಿರುವ ಹಿನ್ನೆಲೆಯಲ್ಲಿ ನಗರದ ಎಲ್ಲ ಫ್ಲ್ಯಾಟ್‌ನ ಟಾಯ್ಲೆಟ್‌ಗಳ ಪ್ಲಶ್‌ನಲ್ಲಿ ಹರಿಯುವ ನೀರಿನ ತೀವ್ರತೆಯ ಪ್ರಮಾಣವನ್ನು ಕಡಿಮೆ ಮಾಡಲು ಮೇಯರ್ ಕವಿತಾ ಸನಿಲ್ ಮನವಿ ಮಾಡಿದ್ದಾರೆ.
ದಿನನಿತ್ಯ ಬಳಸುವುದಕ್ಕಿಂತಲೂ ಅಕ ಪ್ರಮಾಣದ ನೀರು ಪೋಲಾಗುತ್ತಿದೆ. ಇದರಿಂದ ನೀರಿನ ಕೊರತೆ ಎದುರಾಗುತ್ತಿದೆ. ನಗರದಲ್ಲಿ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ಅಪಾರ್ಟ್ ಮೆಂಟ್ ನಿವಾಸಿಗಳು ಟಾಯ್ಲೆಟ್‌ನ ಪ್ಲಶ್‌ನಲ್ಲಿ ಹರಿಯುವ ನೀರಿನ ತೀವ್ರತೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದ್ದಾರೆ.
Next Story





