ವಿಟಿಯು ಅಂತರ್ ಕಾಲೇಜು ಸಾಂಸ್ಕೃತಿಕ ಯುವಜನೋತ್ಸವ: ಆಳ್ವಾಸ್ ಕಾಲೇಜು ರನ್ನರ್ ಅಪ್
.gif)
ಮೂಡುಬಿದಿರೆ, ಮಾ.27: ಬೆಂಗಳೂರು ಯಲಂಹಕದಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಿಟಿಯು ಅಂತರ್ ಕಾಲೇಜು ಸಾಂಸ್ಕೃತಿಕ 2017ರ ಯುವಜನೋತ್ಸವದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ತಂಡವು 47 ಅಂಕಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿ ಗಳಿಸಿದೆ.
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್‌ರಾಮ್ ಸುಳ್ಯ ನಿರ್ದೇಶನದ ‘ಏಕದಶಾನನ’ ಏಕಾಂಕ ನಾಟಕ ಪ್ರಥಮ ಬಹುಮಾನ ಗಳಿಸಿದಲ್ಲದೇ ಯುವಜನೋತ್ಸವದ ಆಕರ್ಷಣೆಯಲ್ಲಿ ಒಂದಾಗಿತ್ತು.
ಉಳಿದಂತೆ ಪ್ರಹಸನ, ಛಾಯಾಚಿತ್ರ ಸ್ಪರ್ಧೆ, ಜಾನಪದ ವಾದ್ಯಗೋಷ್ಠಿ, ಜಾನಪದ ನೃತ್ಯದಲ್ಲಿ ಆಳ್ವಾಸ್ ತಂಡ ಪ್ರಥಮ ಸ್ಥಾನ, ಕ್ಲೇ ಮಾಡೆಲಿಂಗ್, ಇಂಷ್ಟಲೇಶನ್‌ನಲ್ಲಿ ದ್ವಿತೀಯ ಹಾಗೂ ಭಾರತೀಯ ಸಮೂಹ ಗಾಯನದಲ್ಲಿ ತೃತೀಯ ಸ್ಥಾನ ಗಳಿಸಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
Next Story





