ಬೆಳ್ತಂಗಡಿ: ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ

ಬೆಳ್ತಂಗಡಿ, ಮಾ.27: ರಾಜಾರೋಷವಾಗಿ ಅಕ್ರಮ ಮರಳು ಸಂಗ್ರಹ ಮತ್ತು ಸಾಗಾಟ ನಡೆಯುತ್ತಿರುವ ವಿದ್ಯಮಾನ ನಿಟ್ಟಡೆ ಗ್ರಾಮದ ಫಂಡಿಜೆ ಎಂಬಲ್ಲಿ ಕಂಡುಬಂದಿದೆ.
ಫಂಡಿಜೆಯಲ್ಲಿರುವ ಫಲ್ಗುಣಿ ನದಿಗೆ ಕಟ್ಟಲಾದ ತೂಗುಸೇತುವೆಯ ಅನತಿ ದೂರದಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸಿ ಎಗ್ಗಿಲ್ಲದೆ ಮರಳು ಸಂಗ್ರಹ ನಡೆಯುತ್ತಿರುವುದು ನಡೆಯುತ್ತಿದೆ. ಬೇಸಿಗೆ ಕಾಲ ಪ್ರಾರಂಭವಾಗಿನಂದಿನಿಂದ ಅಂದರೆ ಡಿಸೆಂಬರ್ ತಿಂಗಳಿನಿಂದ ಇಂದಿನವರೆಗೆ ಅವ್ಯಾಹಾತವಾಗಿ ಲಕ್ಷಾಂತರ ರೂ. ಮೌಲ್ಯದ ಮರಳು ಸಾಗಾಟವಾಗಿರುವುದು ಕಂಡು ಬಂದಿದೆ.
ನೀರು, ಮರಳೆತ್ತುವ ಯಂತ್ರ, ಟೆಂಪೋ, ಏಳೆಂಟು ಮಂದಿ ಕಾರ್ಮಿಕರ ಸಹಿತ ಕಾರ್ಯಾಚರಣೆ ಯಾವುದೇ ಭಯವಿಲ್ಲದೆ ನಡೆಯುತ್ತಿರುವುದು ಪ್ರತಿನಿತ್ಯದ ದೃಶ್ಯವಾಗಿದೆ. ವೇಣೂರಿನ ಪ್ರಭಾವಿ ವ್ಯಕ್ತಿಯೋರ್ವರ ಈ ಅಕ್ರಮ ಸಾಗಾಟಕ್ಕೆ ಪಂಚಾಯತು, ಪೋಲಿಸ್ ಇಲಾಖೆ ನೋಡಿಯೂ ನೋಡದಂತಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.
Next Story





