ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ವೃದ್ಧೆ ಬೀದಿನಾಯಿಗಳ ಪಾಲು
ರಾಜ್‌ಗಢ, ಮಾ.27: ಬೀದಿ ನಾಯಿಗಳಿಂದ ದಾಳಿಗೊಳಗಾಗಿ ಛಿದ್ರವಾದ ವೃದ್ಧೆಯೊಬ್ಬರ ಮೃತದೇಹ ಇಲ್ಲಿಯ ಜಿಲ್ಲಾಸ್ಪತ್ರೆಯ ಬಳಿ ಪತ್ತೆಯಾಗಿದೆ. ಮಧುಸೂದನ್‌ಗಡ ಪ್ರದೇಶದಿಂದ ಮಾ.19ರಿಂದ ಬಿಸ್ಮಿಲ್ಲಾ ಎಂಬ ಹೆಸರಿನ ಈ ಮಹಿಳೆ ಕಾಣೆ ಯಾಗಿರುವುದಾಗಿ ದೂರು ದಾಖಲಾಗಿತ್ತು. ಜಿಲ್ಲಾಸ್ಪತ್ರೆಯ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಈಕೆಯನ್ನು ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದರು.
ಈಕೆ ರಾತ್ರಿ ವೇಳೆ ಆಸ್ಪತ್ರೆಯಿಂದ ಹೊರ ಬಂದಿರುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. 80ರ ಹರೆಯದ ಈ ಮಹಿಳೆಯ ದೇಹದ ಅರ್ಧಭಾಗವನ್ನು ನಾಯಿಗಳು ತಿಂದು ಹಾಕಿವೆ. ಮಹಿಳೆಯ ಮೃತದೇಹವನ್ನು ಬಂಧುಗಳಿಗೆ ಹಸ್ತಾಂತರಿಸಲಾಗಿದ್ದು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story