ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳ ಕಾರ್ಯನಿರ್ವಹಣಾ ವರದಿ ನಾಶಪಡಿಸಲಿರುವ ಕೇಂದ್ರ
ಹೊಸದಿಲ್ಲಿ, ಮಾ.27: ಎರಡು ವರ್ಷಗಳ ಹಿಂದೆ ನಿವೃತ್ತರಾದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಕಾರ್ಯನಿರ್ವಹಣೆಯ ವೌಲ್ಯಮಾಪನ ವರದಿಗಳನ್ನು ಕೇಂದ್ರ ಸರಕಾರವು ನಾಶಪಡಿಸಲಿದೆ.
ಈ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳಿಗೆ ತಮ್ಮ ಕಾರ್ಯನಿರ್ವಹಣೆ ಕುರಿತ ವರದಿಗಳು ಬೇಕಿದ್ದರೆ ಅವರು ಅದನ್ನು ಪಡೆಯಲು ತನಗೆ ಮನವಿ ಸಲ್ಲಿಸುವಂತೆ ಕೇಂದ್ರ ಸರಕಾರ ಸೋಮವಾರ ಪ್ರಕಟಿಸಿದ ಆದೇಶವೊಂದು ಸೂಚಿಸಿದೆ.
ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳು ನಿವೃತ್ತರಾದ ಅಥವಾ ಮೃತಪಟ್ಟ ಎರಡು ವರ್ಷಗಳ ಬಳಿಕ ಅವರ ಕಾರ್ಯನಿರ್ವಹಣೆ ವರದಿಗಳನ್ನು ನಾಶಪಡಿಸಬೇಕೆಂದು ಪ್ರಚಲಿತ ನಿಯಮಗಳು ತಿಳಿಸುತ್ತವೆ.
ಈ ಅಧಿಕಾರಿಗಳು ನಿವೃತ್ತರಾದ ಎರಡು ವರ್ಷಗಳೊಳಗೆ ಅವರ ಕಾರ್ಯನಿರ್ವಹಣೆ ವರದಿಗಳನ್ನು ಅಥವಾ ಗೌಪ್ಯತಾ ವರದಿಗಳನ್ನು ಕೋರಿಕೆಯ ಮೇರೆಗೆ ಒದಗಿಸಬಹುದಾಗಿದೆ. ತಮ್ಮ ಕಾರ್ಯನಿರ್ವಹಣಾ ವರದಿಗಳನ್ನು ಪಡೆಯಲು ಬಯಸುವ ಅಧಿಕಾರಿಗಳು ಜೂನ್14, 2017ರೊಳಗೆ ಈ ಬಗ್ಗೆ ಮನವಿ ಸಲ್ಲಿಸಬಹುದೆಂದು ಆದೇಶ ತಿಳಿಸಿದೆ.
Next Story