ಕುಪ್ಪೆಪದವು: ರಕ್ತದಾನ ಶಿಬಿರ

ಕುಪ್ಪೆ, ಮಾ.27: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಅಲ್-ಫತಹ್ ಕುಪ್ಪೆಪದವು ಇದರ ಜಂಟಿ ಆಶ್ರಯದಲ್ಲಿ ಎ.ಜೆ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಕುಪ್ಪೆ ಪದವಿನ ಕಾವೇರಿ ವಿದ್ಯಾಲಯದಲ್ಲಿ ಇತ್ತೀಚೆಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಕಾವೇರಿ ವಿದ್ಯಾಲಯದ ಮುಖ್ಯೋಪಾಧ್ಯಾಯ ಸಾಲೆಟ್ ವಾಸು ಉದ್ಘಾಟಿಸಿದರು , ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಫತಹ್ ಅಧ್ಯಕ್ಷ ಮುನೀರ್ ನಡುಪಳ್ಳ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಂಧವ್ಯಕ್ತಿ ಝಕರಿಯಾ ಕುಪ್ಪೆಪದವು ಇವರು ಸ್ವಯಂ ರಕ್ತದಾನ ಮಾಡುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾದರು.
ಮುಖ್ಯ ಅತಿಥಿಗಳಾಗಿ ಅಬ್ದುಲ್ ರಶೀದ್ ಸಖಾಫಿ ಖತೀಬ್, ಕೆ.ಪುರುಷೊತ್ತಮ, ಡಿ.ಪಿ ಹಮ್ಮಬ್ಬ.ವಸಂತ ಆಚಾರಿ.ರಝಾಕ್ ಪದವಿನಂಗಡಿ. ನಿಸಾರ್ ದಮ್ಮಾಮ್ ಉಳ್ಳಾಲ, ರಮೀಝ್,ಶಫೀಕ್ ನಿಝಾಮ್,ರಿಯಾಝ್, ಶರೀಫ್,ಇಮ್ತಿಯಾಝ್,ತೌಸೀಫ್, ರಝಾಕ್, ನೌಫಲ್, ಮುನೀರ್, ಅಶ್ರಫ್,
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸದಸ್ಯರಾದ ಇರ್ಝಾನ್ ಅಡ್ಡೂರು.ಮುಸ್ತಫಾ ದೆಮ್ಮೆಲೆ.ನವಾಝ್ ಉಳ್ಳಾಲ.ರಮೀಝ್ ಕುಪ್ಪೆಪದವು.ಮೆಹತಾಬ್ ಕೈಕಂಬ.ನಿಝಾಂ ಅಡ್ಡೂರು.ರೆಹಮಾನ್ ಅಡ್ಡೂರು.ಬಾಶಿತ್ ಅಡ್ಡೂರು ಮತ್ತಿತರರು ಉಪಸ್ಥಿತರಿದ್ದರು.







