ಜಲ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ

ಮಂಗಳೂರು, ಮಾ.27: ಚೊಕ್ಕಬೆಟ್ಟುವಿನ ಮದ್ರಸತುಲ್ ಅಝೀಝಿಯ್ಯದ ವಿದ್ಯಾರ್ಥಿ ಸಂಘಟನೆ ಎಸ್ಕೆಎಸ್‌ಬಿವಿ ಆಶ್ರಯದಲ್ಲಿ ಒಂದು ತಿಂಗಳ ಜಲದಿನ ಅಭಿಯಾನಕ್ಕೆ ಚೊಕ್ಕಬೆಟ್ಟು ಜಂಕ್ಷನ್‌ನಲ್ಲಿ ಚಾಲನೆ ನೀಡಲಾಯಿತು.
ಶಾಸಕ ಬಿ.ಎ.ಮೊಯ್ದಿನ್ ಬಾವ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ಥಳೀಯ ಇಮಾಮ್ ಮೌಲಾನಾ ಅಝೀಝ್ ದಾರಿಮಿ ಜಲ ಸಂರಕ್ಷಣಾ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಪೊರೇಟರ್‌ಗಳಾದ ಅಯಾಝ್ ಕೃಷ್ಣಾಪುರ, ಅಬ್ದುಲ್ ಜಲೀಲ್ ಬದ್ರಿಯಾ, ಅಶ್ಫಾಕ್, ನೂರ್ ಮುಹಮ್ಮದ್, ಮುಸ್ತಫಾ ದಾರಿಮಿ, ಸಿರಾಜುದ್ದೀನ್ ಮದನಿ, ಉಸ್ಮಾನ್ ಜೌಹರಿ, ಸಿದ್ದೀಕ್ ಮೌಲವಿ, ಉಸ್ಮಾನ್ ಹನೀಫಿ, ಇಸ್ಮಾಯೀಲ್ ಯಮಾನಿ, ಶಿಹಾಬುದ್ದೀನ್, ಶಾಹುಲ್ ಹಮೀದ್, ಇಮ್ರಾನ್, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಸಿರಾಜುದ್ದೀನ್ ಅಝ್‌ಹರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story





