ದೇವೇಗೌಡ ವಿರುದ್ಧ ಅವಹೇಳನ: ಕ್ರಮಕ್ಕೆ ಮನವಿ

ಮಂಗಳೂರು, ಮಾ.27: ದೇಶದ ನಾಡು ನುಡಿಗೆ ಅಪ್ರತಿಮ ಸೇವೆ ಸಲ್ಲಿಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ನ ಅಧ್ಯಕ್ಷ ಎಚ್.ಡಿ.ದೇವೇಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲಾಗಿರುವ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್‌ಗೆ ಇಂದು ಮನವಿ ಸಲ್ಲಿಸಲಾಯಿತು. ಜೆಡಿಎಸ್ ಜಿಲ್ಲಾ ಯುವ ಘಟಕದ ವತಿಯಿಂದ ಮನವಿ ಸಲ್ಲಿಸಲಾದ ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ರಾಜ್ಯ ಘಟಕದ ಮುಖಂಡ ಶ್ರೀನಾಥ್ ರೈ, ಮಹಾ ಪ್ರ.ಕಾರ್ಯದರ್ಶಿ ಮಧುಸೂದನ್ ಗೌಡ, ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಫೈಝಲ್, ತೇಜಸ್ ಶೆಟ್ಟಿ, ಡೆಸ್ಮಂಡ್, ಸಿನಾನ್, ತೇಜಸ್ ನಾಯಕ್ ಉಪಸ್ಥಿತರಿದ್ದರು.
Next Story





