ಆಧಾರ್ ನೋಂದಣಿ ಅಭಿಯಾನ ಉದ್ಘಾಟನೆ

ಮಂಗಳೂರು, ಮಾ. 27: ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ನೇತೃತ್ವದಲ್ಲಿ ನಡೆಯುವ ಆಧಾರ್ ಕಾರ್ಡ್ ನೋಂದಣಿ ಅಭಿಯಾನವು ನಗರದ ಹೊಯ್ಗೆ ಬಝಾರ್‌ನ ದ.ಕ. ಜಿಪಂ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಎ.ಜೆ.ಆಸ್ಪತ್ರೆ ಮಹಾವಿದ್ಯಾಲಯದ ಪ್ರಸೂತಿ ತಜ್ಞೆ ಡಾ. ಕವಿತಾ ಐವನ್ ಡಿಸೋಜ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹೊಯ್ಗೆಬಝಾ
ರ್ ವಾರ್ಡ್‌ನ ಕಾರ್ಪೊರೇಟರ್ ಕವಿತಾವಾಸು, ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಸೀತಾರಾಮ ಜೆಪ್ಪು, ದ.ಕ. ಜಿಲ್ಲಾ ಕಾಂಗ್ರೆಸ್ ಸದಸ್ಯ ನಾರಾಯಣ ಕೋಟ್ಯಾನ್ ಬೋಳಾರ, ಬೋಳಾರ ವಾರ್ಡ್ ಅಧ್ಯಕ್ಷ ಬೆನೆಟ್‌ಡಿಮೆಲ್ಲೋ, ಹೊಯ್ಗೆಬಝಾರ್ ವಾರ್ಡ್ ಅಧ್ಯಕ್ಷ ಹುಸೇನ್ ಬೋಳಾರ, ಕಣ್ಣೂರು ಕಾಂಗ್ರೆಸ್ ನಾಯಕ ಹಬೀಬುಲ್ಲಾ ಕಣ್ಣೂರು, ಅನಿಲ್ ತೋರಸ್ ಜೆಪ್ಪು, ರಾಮದಾಸ ನಾಯಕ್ ಜೆಪ್ಪಿನಮೊಗರು, ಸಿನೇಶ್ ಶೆಟ್ಟಿ ಕೊಟ್ಟಾರ ಉಪಸ್ಥಿತರಿದ್ದರು.
ಮಾಜಿ ಕಾರ್ಪೊರೇಟರ್ ನಾಗೇಂದ್ರಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಯರಾಂ ಶೆಟ್ಟಿ ಬೋಳಾರ ವಂದಿಸಿದರು.
Next Story





