ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಾರ್ಷಿಕ ಸಮಾರಂಭ

ಮಂಗಳೂರು, ಮಾ. 28: ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ಕೆ.ಜಿ. ವಿದ್ಯಾರ್ಥಿಗಳ ವಾರ್ಷಿಕ ಸಮಾರಂಭ ರವಿವಾರ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸ್‌ನ ಸೆನೆಟ್ ಸದಸ್ಯ ಪೊ.ಯು.ಟಿ.ಇಫ್ತಿಕಾರ್ ಅಲಿ ಮಾತನಾಡಿ, ವಿದ್ಯಾರ್ಥಿಗಳ ಆಸಕ್ತಿಯ ವಿಷಯಗಳನ್ನು ಪ್ರೋತ್ಸಾಹಿಸುವ ಜೊತೆಗೆ ಅವರ ಪ್ರತಿಭೆಗಳನ್ನು ಶ್ಲಾಘಿಸುವಂತೆ ಹೆತ್ತವರಿಗೆ ಕಿವಿಮಾತು ಹೇಳಿದರು.
ಬರಕಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಮುಹಮ್ಮದ್ ಅಶ್ರಫ್ ವಿದ್ಯಾರ್ಥಿ ಮತ್ತು ಪೋಷಕರ ನಡುವಿನ ಸಂಬಂಧದ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಯು.ಟಿ.ಇಫ್ತ್ತಿಕಾರ್ ಅಲಿ ಮತ್ತು ಮುಹಮ್ಮದ್ ಅಶ್ರಫ್ ಅವರು ಕೆ3 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಶಾಲೆಯ ವಿದ್ಯಾರ್ಥಿ ಮುಹಮ್ಮದ್ ನಈೀಂ ಕಿರಾಅತ್ ಪಠಿಸಿದರು. ಬಲ್ಕೀಸ್ ಸ್ವಾಗತಿಸಿದರು. ಅತೀಫ್ ಅತಿಥಿಗಳನ್ನು ಪರಿಚಯಿಸಿದರು. ತಂಝಿಲಾ ವಂದಿಸಿದರು.
Next Story





