ಕಾಟಿಪಳ್ಳ ಮಸೀದಿಯ ಪದಾಧಿಕಾರಿಗಳ ಆಯ್ಕೆ
ಸುರತ್ಕಲ್, ಮಾ.27: ಪಣಂಬೂರು ಮುಸ್ಲಿಮ್ ಜಮಾಅತ್ (ರಿ) ಕಾಟಿಪಳ್ಳ ಇದರ ಮುಹಿಯುದ್ದೀನ್ ಜುಮಾ ಮಸೀದಿ ಸಮಿತಿಯ 2017-20ನೆ ಸಾಲಿನ ನೂತನ ಅಧ್ಯಕ್ಷರಾಗಿ ಮುಹಮ್ಮದ್ ತಮೀಂ ಆಯ್ಕೆಯಾಗಿದ್ದಾರೆ.
ಸೋಮವಾರ ಮುಹಮ್ಮದ್ ಸಲೀಂ ರಫೀ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಈ ಪ್ರಕ್ರಿಯೆ ನಡೆಸಲಾಯಿತು ಎಂದು ಚುನಾವಣಾಧಿಕಾರಿ ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಮುಹಮ್ಮದ್ ಪತ್ರಿಕೆಗೆ ತಿಳಿಸಿದ್ದಾರೆ.
ಸಮಿತಿಯ ಉಪಾಧ್ಯಕ್ಷರಾಗಿ ಕೆ. ಅಹ್ಮದ್ ಬಾವಾ ಅಯ್ಯೂಬ್, ಹಸನ್ ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಅಬೂಬಕರ್ ಅಬ್ಬು, ಉಪ ಕಾರ್ಯದರ್ಶಿಗಳಾಗಿ ದಾವೂದ್ ಅಹ್ಮದ್, ಅಬ್ದುರ್ರಶೀದ್, ಕೋಶಾಧಿಕಾರಿಯಾಗಿ ಬಿ.ಅಬೂಬಕರ್ ಅಂಗಡಿ ಸೇರಿದಂತೆ 14 ಮಂದಿ ಸಮಿತಿಯ ಸದಸ್ಯರಾಗಿ ಆಯ್ಕೆಮಾಡಲಾಗಿದೆ.
Next Story





