ಕೇರಳದಲ್ಲಿ ಈಗ ಪ್ಲಸ್ ವನ್ ತರಗತಿಯ ಭೌಗೋಳ (ಜಾಗ್ರಫಿ) ಪರೀಕ್ಷೆ ಕೂಡಾ ವಿವಾದದಲ್ಲಿ
ಪ್ರಶ್ನೆ ಪತ್ರಿಕೆ ಸೋರಿಕೆ

ತಿರುವನಂತಪುರಂ, ಮಾ. 28: ಎಸೆಸೆಲ್ಸಿ ಗಣಿತ ಪರೀಕ್ಷೆ ವಿವಾದಗೊಂಡ ಬೆನ್ನಿಗೆ ಪ್ಲಸ್‌ವನ್‌ನ ಭೌಗೋಳ (ಜಾಗ್ರಫಿ) ಪರೀಕ್ಷೆಯೂ ವಿವಾದಾಸ್ಪದವಾಗಿದೆ. ಪ್ಲಸ್ ವನ್‌ನ ಮಾದರಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾದಅದೇ ಪ್ರಶ್ನೆಗಳು ಪ್ಲಸ್ ವನ್ ಪರೀಕ್ಷೆಯಲ್ಲಿ ಪುನಃ ಬಂದಿರುವುದು ವಿವಾದಕ್ಕೆ ಕಾರಣವಾಗಿದೆ. ಅಂದರೆ ಕೇರಳದಲ್ಲಿ ಮಾರ್ಚ್ 21ಕ್ಕೆ ನಡೆದ ಪ್ಲಸ್ ವನ್ ಪರೀಕ್ಷೆಯಲ್ಲಿ ಭೌಗೋಳ (ಜಾಗ್ರಫಿ)ಯಲ್ಲಿರು ಒಟ್ಟು ಅರುವತ್ತು ಮಾರ್ಕ್‌ಗಳಲ್ಲಿ 43 ಮಾರ್ಕ್ ಪ್ರಶ್ನೆಗಳು ಪುನರಾವರ್ತನೆಗೊಂಡಿವೆ ಎನ್ನಲಾಗಿದೆ.
ಎಡಪಂಥೀಯ ಅಧ್ಯಾಪಕ ಸಂಘಟನೆಯಾದ ಕೆಎಸ್‌ಟಿಎ ಮಾದರಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸಿತ್ತು ಎನ್ನುವುದು ಗಮನಾರ್ಹ. ತಿರುವನಂತಪುರಂ, ಕೊಲ್ಲಂ ಜಿಲ್ಲೆಗಳ ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿಯೂ ಇದೇ ರೀತಿ ಇತ್ತೆಂದು ಕೂಡಾ ಆರೋಪ ಕೇಳಿ ಬಂದಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡಿದ್ದ ಅದೇ ಪ್ರಶ್ನೆಗಳು ಎಸೆಸೆಲ್ಸಿ ಗಣಿತದ ಪಬ್ಲಿಕ್ ಪರಿಕ್ಷೆಯಲ್ಲಿ ಪುನಃ ಬಂದಿದ್ದರಿಂದ ವಿವಾದ ಹುಟ್ಟಿಕೊಂಡಿತ್ತು. ಇದರ ಬೆನ್ನಿಗೆ ಈಗ ಪ್ಲಸ್ ವನ್‌ನ ಭೌಗೋಳ (ಜಾಗ್ರಫಿ) ಪ್ರಶ್ನೆ ಪತ್ರಿಕೆ ಕೂಡಾ ವಿವಾದದ ಸುಳಿಗೆ ಸಿಕ್ಕಿದೆ. ಎಸೆಸೆಲ್ಸಿ ಗಣಿತದ ಮರುಪರೀಕ್ಷೆ ಇದೇ ತಿಂಗಳು ಮೂವತ್ತನೆ ತಾರೀಕಿಗೆ ನಡೆಯಲಿದೆ.







