ನೈಜೀರಿಯನ್ ವಿದ್ಯಾರ್ಥಿಗಳಿಗೆ ಹಲ್ಲೆ: ವರದಿ ಕೇಳಿದ ಸುಷ್ಮಾ ಸ್ವರಾಜ್

ಹೊಸದಿಲ್ಲಿ, ಮಾ. 28: ಗ್ರೇಟರ್ ನೊಯ್ಡಾದಲ್ಲಿ ನೈಜೀರಿಯನ್ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಘಟನೆಯ ವರದಿಯನ್ನು ಉತ್ತರ ಪ್ರದೇಶಸರಕಾರದಿಂದ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಕೇಳಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದೆಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಸುಷ್ಮಾತಿಳಿಸಿದ್ದಾರೆ.
ಕಳೆದ ದಿವಸ ಪಾರಿಚೌಕ್‌ನಲ್ಲಿ ಸ್ಥಳೀಯ ಕೆಲವರು ನೈಜೀರಿಯನ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಎಸಗಿದ್ದರು. ಮಿತಿ ಮೀರಿ ಮಾದಕವಸ್ತು ಸೇವಿಸಿದ ಕಾರಣದಿಂದ ಮನೀಷ್ ಖೆರೆ ಎನ್ನುವ ಯುವಕ ಮೃತಪಟ್ಟಿದ್ದು, ಇದನ್ನು ಸ್ಥಳೀಯರು ಪ್ರತಿಭಟಿಸುತ್ತಿದ್ದರು. ಮಾದಕವಸ್ತುವನ್ನು
ನೈಜೀರಿಯದ ಐವರು ಯುವಕರು ವಿತರಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಈನೆಪದಲ್ಲಿ ನೈಜೀರಿಯನ್ ವಿದ್ಯಾರ್ಥಿಗಳಿಗೆ ಅವರು ಯದ್ವಾತದ್ವಾ ಥಳಿಸಿದ್ದಾರೆ.
I have asked for a report from Government of Uttar Pradesh about the reported attack on African students in Noida.
— Sushma Swaraj (@SushmaSwaraj) March 27, 2017
I have spoken to Yogi Adityanath ji Chief Minister of Uttar Pradesh about attack on African students in Greater Noida. /1
— Sushma Swaraj (@SushmaSwaraj) March 28, 2017