ಕುರ್ ಆನ್ ಪಬ್ಲಿಕ್ ಪರೀಕ್ಷಾ ಫಲಿತಾಂಶ, ವಿದ್ಯಾರ್ಥಿನಿಯರ ಮೇಲುಗೈ
ಮಂಗಳೂರು, ಮಾ.28: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ಅಧೀನ ಸಂಸ್ಥೆ ಸಲಫಿ ಎಜುಕೇಶನ್ ಬೋರ್ಡ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಮುಜಾಹಿದ್ ಗರ್ಲ್ಸ್ ಮೂವ್‍ಮೆಂಟ್ ಇದರ ಜಂಟಿ ಆಶ್ರಯದಲ್ಲಿ ಮಾ.19ರಂದು ನಡೆದ ದ್ವಿತೀಯ ಕುರ್ ಆನ್ ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಹಿರಿಯರ ವಿಭಾಗದಲ್ಲಿ ಮರ್ಯಮ್ ಬಾನು ಉಳ್ಳಾಲ, ಫೈರೋಝ ತಲಪಾಡಿ, ಯು.ಟಿ ಫೌಝಿಯಾ ಬಾನು ಅಡ್ದೂರು ಪ್ರಥಮ ಸ್ಥಾನ ಗಳಿಸಿದ್ದಾರೆ, 7 ಮಂದಿ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಮತ್ತು ಐದು ಮಂದಿ ವಿದ್ಯಾರ್ಥಿನಿಯರು ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ವಿಭಾಗದಲ್ಲಿ ಝಫ್ರೀನ ಕುಂಜತ್ತಬೈಲ್ ಮತ್ತು ಉಳ್ಳಾಲ ಅಳೇಕಲ ಅಲ್ ಫುರ್ಕಾನ್ ಮದ್ರಸದ ವಿದ್ಯಾರ್ಥಿನಿ ಅತೀಯಾ ಸನೂರ ಅಳೇಕಲ ಉಳ್ಳಾಲ ಪ್ರಥಮ , ದೇರಳಕಟ್ಟೆ ಮದ್ರಸತುಲ್ ಇಸ್ಲಾಹಿಯ್ಯದ ವಿದ್ಯಾರ್ಥಿನಿ ಮುಬಶ್ಶಿರ ದ್ವಿತೀಯ (H.T.No. 00371), ಕುಂಜತ್ತಬೈಲ್ ಮದ್ರಸತುಲ್ ಬಿಲಾಲ್ ನ ವಿದ್ಯಾರ್ಥಿನಿ ಎ ಅಸ್ರೀನ್, ದೇರಳಕಟ್ಟೆ ಮದ್ರಸತುಲ್ ಇಸ್ಲಾಹಿಯ್ಯದ ವಿದ್ಯಾರ್ಥಿನಿ ಸುಹೈಬತುಲ್ ಅಸ್ಲಮಿಯ್ಯ ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಸಲಫಿ ಎಜುಕೇಶನ್ ಬೋರ್ಡ್ ಕಾರ್ಯದರ್ಶಿ ಅಬೂಬಿಲಾಲ್ ಎಸ್.ಎಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







