ನಕ್ಸಲ್ ಪೀಡಿತ ಪ್ರದೇಶದಿಂದ ಕೆನಡಾ ಪ್ರಜೆ ನಾಪತ್ತೆ

ರಾಯಪುರ,ಮಾ.28: ಒಡಿಶಾ ಮತ್ತು ಛತ್ತೀಸ್‌ಗಡ ನಡುವಿನ ಅಂತರ್‌ರಾಜ್ಯ ಗಡಿಗೆ ಸಮೀಪದ ನಕ್ಸಲ್ ಪೀಡಿತ ಬುಡಕಟ್ಟು ಬಸ್ತರ್ ಪ್ರದೇಶದಿಂದ ಕೆನಡಾದ ಪ್ರಜೆಯೋರ್ವ ನಾಪತ್ತೆಯಾಗಿದ್ದು, ಇದು ಉಭಯ ರಾಜ್ಯಗಳ ಪೊಲೀಸರನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ತಾನು ಈ ಬಗ್ಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೊತೆಗೆ ಮಾತನಾಡಿದ್ದೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟಿಸಿದ್ದಾರೆ.
ಕೆನಡಾದ ಪ್ರಜೆ ಜಾನ್ ಶಲಝಕ್ ಸುಕ್ಮಾ ತಲುಪಿರಬಹುದೆಂಬ ಅನಧಿಕೃತ ವರದಿಗಳ ಹಿನ್ನೆಲೆಯಲ್ಲಿ ಬಸ್ತರ್ ಪೊಲೀಸರು ಕಟ್ಟೆಚ್ಚರದಲ್ಲಿದ್ದಾರೆ.
ಆದರೆ ಬಸ್ತರ್ ವಿಭಾಗದಲ್ಲಿ ವಾಸವಿರುವ ಬಗ್ಗೆ ಯಾವುದೇ ವಿದೇಶಿ ಪ್ರಜೆ ಪೊಲೀಸರ ಬಳಿ ನೋಂದಾಯಿಸಿಕೊಂಡಿಲ್ಲ. ಸದ್ಯಕ್ಕೆ ಮಾವೋವಾದಿಗಳು ಅಪಹರಿಸಿರುವ ಕುರಿತು ಯಾವುದೇ ಮಾಹಿತಿ ಪೊಲೀಸರಿಗೆ ಸಿಕ್ಕಿಲ್ಲ ಎಂದು ಬಸ್ತರ್ ಐಜಿಪಿ ಸೌಂದರರಾಜ್ ಪಿ. ಅವರು ತಿಳಿಸಿದರು.
Next Story