ಕೆಸಿಎಫ್ ಅಲ್ ರಾಸ್ ವಾರ್ಷಿಕ ಮಹಾಸಭೆ

ರಿಯಾದ್, ಮಾ.28: ಕೆಸಿಎಫ್ ಅಲ್ ರಾಸ್ ಸೆಕ್ಟರ್ ಮಹಾಸಭೆ ಮಾ.24ರಂದು ಕೆಸಿಎಫ್ ಕಚೇರಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ದುಆ ನೆರವೇರಿಸಿದರು, ಹೈದರ್ ಇರ್ಫಾನಿ ಯವರ ಅಧ್ಯಕ್ಷ ತೆಯಲ್ಲಿ ಜರುಗಿದ ಸಭೆಯನ್ನು ಇಸ್ಹಾಕ್ ಬಾ-ಹಸನಿ ಸ್ವಾಗತದೊಂದಿಗೆ ಝುಭೈರ್ ಉಸ್ತಾದ್ ಉಧ್ಘಾಟಿಸಿದರು.
ಪ್ರ.ಕಾರ್ಯದರ್ಶಿ ಫೈಝಲ್ ಮಠ ಮಂಡಿಸಿದ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆಯನ್ನು ಸಭಿಕರ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಕೆಸಿಎಫ್ ಸೌದಿ ರಾಷ್ಟ್ರೀಯ ಅಧ್ಯಕ್ಷ ಬಹು.ಡಿ.ಪಿ.ಯೂಸುಫ್ ಸಖಾಫಿ ಬೈತಾರ್ "ಜೀವನ ನಾಡಿಗಾಗಿ ನಾಳೆಗಾಗಿ" ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ನಂತರ ಚುಣಾವಣಾ ವೀಕ್ಷಕರಾಗಿ ಆಗಮಿಸಿದಂತ ಕೆ.ಸಿ.ಎಫ್ ರಿಯಾದ್ ಝೋನಲ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಲೀಮ್ ಕನ್ಯಾಡಿ ಇವರ ಮೆಲ್ನೋಟದಲ್ಲಿ ಹಳೆಯ ಸಮಿತಿ ಬರ್ಕಾಸು ಗೊಳಿಸಿ ನೂತನ ಸಮಿತಿ ಆಯ್ಕೆ ಗೊಳಿಸಲಾಯಿತು.
2017-19 ನೂತನ ಸಮಿತಿ ವಿವರ:
ಅಧ್ಯಕ್ಷ: ಇಸ್ಹಾಕ್ ಬಾ-ಹಸನಿ ಉಜಿರೆಬೆಟ್ಟು, ಪ್ರ.ಕಾರ್ಯದರ್ಶಿ: ಫೈಝಲ್ ಮಠ, ಕೋಶಾಧಿಕಾರಿ: ಮೋಹಮ್ಮದ್ ಅಸ್ಬರ್ ನೀರಕಟ್ಟೆ,
ಶಿಕ್ಷಣ ವಿಭಾಗ:
ಅಧ್ಯಕ್ಷ: ಅಬ್ದುಲ್ ಖಾದರ್ ಮದನಿ, ಕಾರ್ಯದರ್ಶಿ: ಝುಬೈರ್ ಉಸ್ತಾದ್
ಕಚೇರಿ ವಿಭಾಗ:
ಅಧ್ಯಕ್ಷ: ಮುನೀರ್ ಆತೂರ್, ಕಾರ್ಯದರ್ಶಿ: ಶಂಶುದ್ದೀನ್ ಉಜಿರೆಬೆಟ್ಟು
ಸಾಂತ್ವನ ವಿಭಾಗ:
ಅಧ್ಯಕ್ಷ: ಅಬ್ದುಲ್ ರಹಿಮಾನ್ ಕಂಬಳಬೆಟ್ಟು, ಕಾರ್ಯದರ್ಶಿ: ಹಂಝ ಮದನಿ ಕೂಡಗು
ಸಂಘಟನ ವಿಭಾಗ:
ಅಧ್ಯಕ್ಷ: ಹೈದರ್ ಇರ್ಫಾನಿ ಪೆರಾಳ, ಕಾರ್ಯದರ್ಶಿ: ಅಬ್ದುಲ್ ಅಝೀಝ್
ಪಬ್ಲಿಶಿಂಗ್ ವಿಭಾಗ:
ಅಧ್ಯಕ್ಷ: ಇಬ್ರಾಹಿಂ ಬೆಂಗರೆ, ಕಾರ್ಯದರ್ಶಿ: ಇಬ್ರಾಹಿಂ ಕೆಮ್ಮಾರ
ಕಾರ್ಯಕಾರಿ ಸಮೀತಿಯ ಸದಸ್ಯರು: ನವಾಝ್ ಪುತ್ತೂರು, ಬಶೀರ್ ಕಾರ್ಕಳ, ಬಶೀರ್ ಪುತ್ತೂರು, ಖಾದರ್ ಹಾಸನ, ಇಸ್ಮಾಲ್ ಮಠ, ಅನ್ಸಾರ್ ಸರಳಿಕಟ್ಟೆ, ಸಾಜಿದ್ ಕೊಡಗು, ಸಫೀಕ್ ಕೊಡಗು, ಮಜೀದ್ ಕೊಡಗು, ಖಾದರ್ ಕೊಡಗು, ಸಬೀಲ್ ಕೊಡಗು, ರಫೀಕ್ ಕೊಡಗು.
ನೂತನ ಸಮಿತಿಯನ್ನು ರಿಯಾದ್ ಝೊನಲ್ ನಾಯಕರಾದ ಅಬ್ದುಲ್ಲ ಸಖಾಫಿ ಹಾಗೂ ನವಾಝ್ ಸಖಾಫಿ ಪ್ರಾಸ್ತಾವಿಕ ಮಾತುಗಳೂಂದಿಗೆ ಶುಭಾಶಯ ಕೋರಿದರು. ಕಾರ್ಯದರ್ಶಿ ಫೈಝಲ್ ಮಠ ವಂದಿಸಿದರು.







