ಕಡ್ಲೆಕೆರೆ ನಿಸರ್ಗಧಾಮಕ್ಕೆ ಬೆಂಕಿ

ಮೂಡುಬಿದಿರೆ, ಮಾ.28: ಇಲ್ಲಿನ ಕಡ್ಲೆಕೆರೆ ನಿಸರ್ಗಧಾಮಕ್ಕೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಸ್ಳಳಕ್ಕೆ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದೆ, ಅಲ್ಲಿಯೇ ಸಮೀಪದಲ್ಲಿ ಕ್ರಿಕೆಟ್ ಆಡುತ್ತಿರುವವರ ಗುಂಪು ಬೆಂಕಿಯನ್ನು ಗಮನಿಸಿ ನಂದಿಸುವಲ್ಲಿ ಪ್ರಯತ್ನ ಪಟ್ಟರು. ನಂತರ ಅಗ್ನಿಶಾಮಕದಳದವರಿಗೆ ವಿಷಯ ತಿಳಿಸಿದರೆನ್ನಲಾಗಿದೆ.
Next Story





