ರಿಯಾಝ್ ಮುಸ್ಲಿಯಾರ್ ಕುಟುಂಬಕ್ಕೆ 'ದಾರುಲ್ ಖೈರ್' ಮನೆ ನಿರ್ಮಾಣ ಯೋಜನೆ: ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಘೋಷಣೆ

ಕೋಝಿಕೋಡು,ಮಾ.28: ಕಾಸರಗೋಡು ಚೂರಿ ಎಂಬಲ್ಲಿನ ಮಸೀದಿಯೊಂದರಲ್ಲಿ ದುಷ್ಕರ್ಮಿಗಳ ಮಚ್ಚಿನೇಟಿಗೆ ಬಲಿಯಾದ ಮಡಿಕೇರಿ ನಿವಾಸಿ ರಿಯಾಝ್ ಮುಸ್ಲಿಯಾರ್ ಕುಟುಂಬಕ್ಕೆ ಸುನ್ನೀ ಸಂಘಟನೆಗಳ ನೇತೃತ್ವದಲ್ಲಿ 'ದಾರುಲ್ ಖೈರ್' ಮನೆ ನಿರ್ಮಿಸಿ ಕೊಡುವುದಾಗಿ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಘೊಷಿಸಿದ್ದಾರೆ.
ಮೃತ ರಿಯಾಝ್ ಮುಸ್ಲಿಯಾರ್ ಕುಟುಂಬ ಬಡತನದ ಬೇಗೆಯಿಂದ ಬಳಲುತ್ತಿರುವ ಕುಟುಂಬವಾಗಿದ್ದು ಇದೀಗ ರಿಯಾಝ್ ಮುಸ್ಲಿಯಾರ್ ಅಗಲಿಕೆ ಕುಟುಂಬವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ, ಈ ನಿಟ್ಟಿನಲ್ಲಿ ಸರ್ವ ಸುನ್ನೀ ಸಂಘಟನೆಗಳ ಮುಂದಾಳತ್ವದಲ್ಲಿ ರಿಯಾಝ್ ಮುಸ್ಲಿಯಾರರ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿ ಕೊಡುವ ಮಹತ್ವದ ಯೋಜನೆಗೆ ಕೈ ಹಾಕಿದೆ ಎಂದು ಕಾಂತಪುರಂ ಎ.ಪಿ ಉಸ್ತಾದ್ ತಿಳಿಸಿದ್ದಾರೆ.
Next Story





