Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವರ್ಣಭೇದ ವಿರೋಧಿ ಹೋರಾಟಗಾರ ಅಹ್ಮದ್...

ವರ್ಣಭೇದ ವಿರೋಧಿ ಹೋರಾಟಗಾರ ಅಹ್ಮದ್ ಕತ್ರಡ ಇನ್ನಿಲ್ಲ

ವಾರ್ತಾಭಾರತಿವಾರ್ತಾಭಾರತಿ28 March 2017 7:50 PM IST
share
ವರ್ಣಭೇದ ವಿರೋಧಿ ಹೋರಾಟಗಾರ ಅಹ್ಮದ್ ಕತ್ರಡ ಇನ್ನಿಲ್ಲ

ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಮಾ. 28: ದಕ್ಷಿಣ ಆಫ್ರಿಕದ ಖ್ಯಾತ ವರ್ಣಭೇದ ವಿರೋಧಿ ಹೋರಾಟಗಾರ ಅಹ್ಮದ್ ಕತ್ರಡ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ರಾಬಿನ್ ದ್ವೀಪದಲ್ಲಿ ಕೈದಿಯಾಗಿದ್ದ ಅವರು ದಕ್ಷಿಣ ಆಫ್ರಿಕದ ಶ್ವೇತವರ್ಣೀಯರ ಆಡಳಿತದ ವಿರುದ್ಧದ ಹೋರಾಟದಲ್ಲಿ ನೆಲ್ಸನ್ ಮಂಡೇಲಾರ ಆಪ್ತ ಸ್ನೇಹಿತನಾಗಿದ್ದರು.

1964ರಲ್ಲಿ ನಡೆದ ರಿವೋನಿಯ ವಿಚಾರಣೆಯಲ್ಲಿ, ಮಂಡೇಲಾ ಜೊತೆಗೆ ಕತ್ರಡ ಅವರನ್ನೂ ವಿಚಾರಣೆಗೊಳಪಡಿಸಿ ಜೈಲಿಗೆ ಕಳುಹಿಸಲಾಗಿತ್ತು. ಈ ವಿಚಾರಣೆಯು ಜಗತ್ತಿನ ಗಮನವನ್ನು ವರ್ಣಭೇದ ಆಡಳಿತದ ಕ್ರೂರ ಕಾನೂನು ವ್ಯವಸ್ಥೆಯತ್ತ ಸೆಳೆದಿತ್ತು.

ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕೊಂಚ ಸಮಯ ಅಸ್ವಸ್ಥರಾಗಿದ್ದ ಅವರು ಜೊಹಾನ್ಸ್‌ಬರ್ಗ್‌ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.

ಕತ್ರಡ 26 ವರ್ಷ ಮತ್ತು ಮೂರು ತಿಂಗಳನ್ನು ಜೈಲಿನಲ್ಲಿ ಕಳೆದರು. ಈ ಪೈಕಿ 18 ವರ್ಷಗಳನ್ನು ಅವರು ರಾಬಿನ್ ದ್ವೀಪದ ಜೈಲಿನಲ್ಲಿ ಕಳೆದರು.

ವರ್ಣಭೇದ ಆಡಳಿತ ಪತನಗೊಂಡ ಬಳಿಕ, 1994ರಿಂದ 1999ರವರೆಗೆ ಮೊದಲ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ ಸರಕಾರದಲ್ಲಿ ಅವರು ಅಧ್ಯಕ್ಷ ನೆಲ್ಸನ್ ಮಂಡೇಲಾರ ಸಂಸದೀಯ ಸಲಹಾಕಾರರಾಗಿ ಸೇವೆ ಸಲ್ಲಿಸಿದರು.

‘‘ಇದು ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್, ಅದರಲ್ಲೂ ಮುಖ್ಯವಾಗಿ ಸ್ವಾತಂತ್ರ ಚಳವಳಿ ಮತ್ತು ದಕ್ಷಿಣ ಆಫ್ರಿಕ ಅನುಭವಿಸಿದ ಬೃಹತ್ ನಷ್ಟವಾಗಿದೆ’’ ಎಂದು ಅಹ್ಮದ್ ಕತ್ರಡ ಫೌಂಡೇಶನ್‌ನ ಮುಖ್ಯಸ್ಥ ನೀಶನ್ ಬಾಲ್ಟನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ ‘ಕ್ಯಾತಿ’ ಜಗತ್ತಿನ ವಿವಿಧ ಭಾಗಗಳ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದರು’’ ಎಂದು ಅವರು ಹೇಳಿದ್ದಾರೆ.

17ರ ವಯಸ್ಸಿನಲ್ಲೇ ಹೋರಾಟ

ಬಿಳಿಯ ಅಲ್ಪಸಂಖ್ಯಾತರ ವರ್ಣಭೇದ ಸರಕಾರದ ವಿರುದ್ಧದ ಅವರ ಹೋರಾಟ 17ರ ವಯಸ್ಸಿನಲ್ಲೇ ಆರಂಭಗೊಂಡಿತು. ಭಾರತೀಯ ದಕ್ಷಿನ ಆಫ್ರಿಕನ್ನರ ವಿರುದ್ಧ ತಾರತಮ್ಯ ತೋರಿಸುವ ಕಾನೂನುಗಳನ್ನು ಉಲ್ಲಂಘಿಸಿದುದಕ್ಕಾಗಿ 1946ರಲ್ಲಿ ಪೊಲೀಸರು 2,000 ಮಂದಿಯನ್ನು ಬಂಧಿಸಿದ್ದರು. ಆ ಪೈಕಿ ಅಹ್ಮದ್ ಕತ್ರಡ ಕೂಡ ಒಬ್ಬರಾಗಿದ್ದರು.

ಆಫ್ರಿಕನ್ ನ್ಯಾಶನಲ್ ಕಾಂಗ್ರೆಸನ್ನು 1960ರಲ್ಲಿ ನಿಷೇಧಿಸಲಾಯಿತು. ಎರಡು ವರ್ಷಗಳ ಬಳಿಕ ಕತ್ರಡ ಅವರನ್ನು ‘ಗೃಹ ಬಂಧನ’ದಲ್ಲಿರಿಸಲಾಯಿತು. ಅಲ್ಲಿಂದಲೇ ಅವರು ಭೂಗತರಾದರು.

1963 ಜುಲೈಯಲ್ಲಿ ಜೊಹಾನ್ಸ್‌ಬರ್ಗ್‌ನ ಉಪನಗರ ರಿವೋನಿಯದಲ್ಲಿರುವ ಲಿಲಿಸ್ಲೀಫ್ ಫಾರ್ಮ್ ಮೇಲೆ ದಾಳಿ ನಡೆಸಿದ ಪೊಲೀಸರು ಕತ್ರಡರನ್ನು ಬಂಧಿಸಿದರು. ಅಲ್ಲಿ ಕತ್ರಡ ಮತ್ತು ಇತರ ಹಿರಿಯ ಸದಸ್ಯರು ರಹಸ್ಯವಾಗಿ ಭೇಟಿಯಾಗುತ್ತಿದ್ದರು.

ಬಳಿಕ ನಡೆದ ಪ್ರಸಿದ್ಧ ರಿವೋನಿಯ ವಿಚಾರಣೆಯಲ್ಲಿ, ಕತ್ರಡ ಸೇರಿದಂತೆ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅವರು ರಾಬಿನ್ ದ್ವೀಪದಲ್ಲಿ ಕಠಿಣ ಕೆಲಸ ಮಾಡಬೇಕಾಗಿತ್ತು. ಅವರೊಂದಿಗಿದ್ದ ಇತರ ಕೈದಿಗಳೆಂದರೆ ಮಂಡೇಲ, ವಾಲ್ಟರ್ ಸಿಸುಲು ಮತ್ತು ಡೆನಿಸ್ ಗೋಲ್ಡ್‌ಬರ್ಗ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X