ಬಿಸಿಲ ಭೀಕರ ಝಳಕ್ಕೆ ತುತ್ತಾಗುವ ಭಾರತೀಯ ನಗರಗಳು : ವಿಜ್ಞಾನಿಗಳ ಎಚ್ಚರಿಕೆ

ಲಂಡನ್, ಮಾ. 28: 2015ರಲ್ಲಿ ಭಾರತದಲ್ಲಿ 2,000ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಂಥ ಉಷ್ಣ ಗಾಳಿ ಕೋಲ್ಕತದಂಥ ಜಾಗತಿಕ ಮಹಾನಗರಗಳಲ್ಲಿ ಪ್ರತಿ ವರ್ಷವೂ ಬೀಸಬಹುದು ಹಾಗೂ ಜಾಗತಿಕ ತಾಪಮಾನವನ್ನು ಪ್ಯಾರಿಸ್ ಒಪ್ಪಂದದ ಮಟ್ಟಕ್ಕೆ ನಿಯಂತ್ರಿಸಿದರೂ ಇದು ಸಂಭವಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
2015ರ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳು ಜಾಗತಿಕ ತಾಪಮಾನವನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿನ ಮಟ್ಟದಲ್ಲಿ ಕಾಯ್ದುಕೊಳ್ಳಲು ನಿರ್ಧರಿಸಿವೆ.
ಆದರೆ, ಈ ಹೆಚ್ಚುವರಿ ಎರಡು ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲೇ ತೀವ್ರ ಪ್ರಮಾಣದ ಉಷ್ಣ ಗಾಳಿ ಬೀಸಬಹುದಾಗಿದೆ ಎಂದು ಸಂಶೋಧಕರು ಹೇಳುತ್ತಾರೆ.
ಆದರೆ, 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚುವರಿ ಉಷ್ಣತೆಯನ್ನು ತಲುಪುವುಷ್ಟರಲ್ಲೇ, ತೀವ್ರ ಬಿಸಿಲ ಆಘಾತಕ್ಕೆ ತುತ್ತಾಗುವ ನಗರಗಳ ಸಂಖ್ಯೆ ದುಪ್ಪಟ್ಟಾಗುತ್ತದೆ ಎಂದ ಅವರು ಹೇಳುತ್ತಾರೆ.
101 ಅತ್ಯಂತ ಜನಭರಿತ ಬೃಹತ್ ನಗರಗಳ ಪೈಕಿ 44 ನಗರಗಳ ವಿಶ್ಲೇಷಣೆ ನಡೆಸುವಾಗಲೇ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.







