ಕಿಮ್ ಜಾಂಗ್ ನಾಮ್ ದೇಹ ಈಗಲೂ ಶವಾಗಾರದಲ್ಲಿ: ಮಲೇಶ್ಯ

ಕೌಲಾಲಂಪುರ (ಮಲೇಶ್ಯ), ಮಾ. 28: ಆರು ವಾರಗಳ ಹಿಂದೆ ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಹತ್ಯೆಯಾದ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಪರಿತ್ಯಕ್ತ ಸಹೋದರ ಕಿಮ್ ಜಾಂಗ್ ನಾಮ್ ಅವರ ದೇಹ ಕೌಲಾಲಂಪುರದ ಶವಾಗಾರದಲ್ಲೇ ಈಗಲೂ ಇದೆ ಎಂದು ಮಲೇಶ್ಯ ಮಂಗಳವಾರ ಹೇಳಿದೆ.
ಮೃತದೇಹವನ್ನು ಪಡೆದುಕೊಳ್ಳಲು ಅವರ ಕುಟುಂಬಸ್ಥರು ಬರುವುದನ್ನು ಎದುರು ನೋಡುತ್ತಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಎಸ್. ಸುಬ್ರಮಣ್ಯಮ್ ಹೇಳಿದರು.
ಉತ್ತರ ಕೊರಿಯದಲ್ಲಿ ಅಲ್ಲಿನ ಸರಕಾರ ಹಿಡಿದಿಟ್ಟುಕೊಂಡಿರುವ ಒಂಬತ್ತು ಮಲೇಶ್ಯನ್ನರ ವಾಪಸಾತಿಗೆ ಪ್ರತಿಯಾಗಿ ಮೃತದೇಹವನ್ನು ಆ ದೇಶಕ್ಕೆ ಹಿಂದಿರುಗಿಸಲಾಗಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿದ್ದವು.ಆದರೆ, ಈ ಊಹಾಪೋಹಗಳನ್ನು ಆರೋಗ್ಯ ಸಚಿವರು ನಿರಾಕರಿಸಿದರು.
Next Story





