ಅಕ್ರಮ ಮರಳುಗಾರಿಕೆಗೆ ದಾಳಿ: ಸೊತ್ತುಗಳು ವಶ
.jpg)
ಸಾಂದರ್ಭಿಕ ಚಿತ್ರ
ಬ್ರಹ್ಮಾವರ, ಮಾ.28: ಆರೂರು ಗ್ರಾಮದ ದಾಸಬೆಟ್ಟು ಮಡಿಸಾಲು ಹೊಳೆಯಲ್ಲಿ ಮಾ.27ರಂದು ದಾಸಬೆಟ್ಟುವಿನ ರಕ್ಷಿತ್ ಹಾಗೂ ನೀಲಾವರದ ವರದೇಂದ್ರ ಎಂಬವರು ಯಾಂತ್ರಿಕೃತ ದೋಣಿ ಬಳಸಿ ಅಕ್ರಮವಾಗಿ ನಡೆಸುತ್ತಿದ್ದ ಮರಳುಗಾರಿಕೆಗೆ ದಾಳಿ ನಡೆಸಿದ ಭೂವಿಜ್ಞಾನಿ ಮಹೇಶ್ ನೇತೃತ್ವದ ತಂಡ, 1 ಟಿಪ್ಪರ್ ಲಾರಿ, ಜೆಸಿಬಿ, ಕಬ್ಬಿಣ ಪೊಲ್, 4 ಮೆಟ್ರಿಕ್ ಟನ್ ಮರಳು, ಒಂದು ಯಂತ್ರಿಕೃತ ದೋಣಿಗಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಬಸ್ರೂರು ಗ್ರಾಮದ ಹಟ್ಟಿಕುದ್ರು ಬಳಿಯ ವರಾಹಿ ನದಿಯ ತೀರದಲ್ಲಿ ಹಟ್ಟಿಯಂಗಡಿಯ ರಾಜು ಎಂಬವರು ಮಾ.27ರಂದು ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಡಾ.ಮಹದೇಶ್ವರ ಎಚ್.ಎಸ್. ನೇತೃತ್ವದ ತಂಡ, ಒಂದು ದೋಣಿ ಹಾಗೂ ದೋಣಿಯಲ್ಲಿನ 10ರಿಂದ 15 ಬುಟ್ಟಿ ಪ್ರಮಾಣದ ಮರಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಆರೂರು ಗ್ರಾಮದ ಕುರ್ಡುಂಜೆ ಮಡಿಸಾಲು ಹೊಳೆಯಲ್ಲಿ ಮಾ.27ರಂದು ರವೀಂದ್ರ ನಾಯಕ್ ಎಂಬವರು ಯಾಂತ್ರಿಕೃತ ದೋಣಿ ಬಳಸಿ ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಮಹೇಶ್ ನೇತೃತ್ವದ ಅಧಿಕಾರಿಗಳ ತಂಡ ಒಂದು ಯಾಂತ್ರಿಕೃತ ದೋಣಿಯನ್ನು ವಶ ಪಡಿಸಿಕೊಂಡಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





