ಕರ್ಣಾಟಕ ಬ್ಯಾಂಕ್‌ನಿಂದ 10 ಸಾವಿರ ಪಿಒಎಸ್ ಟರ್ಮಿನಲ್‌ಗೆ ಚಾಲನೆ

ಮಂಗಳೂರು, ಮಾ.28: ಕರ್ಣಾಟಕ ಬ್ಯಾಂಕ್ ತನ್ನ ಡಿಜಿಟಲ್ ಉದ್ಯಮ ಶೀಲತೆಯ ಅಂಗವಾಗಿ ಪಿಎಸ್‌ಒ ಯಂತ್ರಗಳನ್ನು ವಿತರಿಸುತ್ತಿದ್ದು, ಇದು ವರೆಗೆ 10 ಸಾವಿರ ಬ್ಯಾಂಕಿಂಗ್ ಸೇವಾ ಪಿಒಎಸ್‌ಗಳನ್ನು ವಿತರಿಸಿತು ಎಂದು ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪಿ. ಜಯರಾಮ ಭಟ್ ತಿಳಿಸಿದರು.
ಬೆಂಗಳೂರಿನಲ್ಲಿ ಬ್ಯಾಂಕ್‌ನ ಪ್ರಾದೇ ಶಿಕ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ನಂದನಾ ಗ್ರೂಫ್ ಆಫ್ ಹೊಟೇಲ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ.ರವಿಚಂದರ್‌ರವರಿಗೆ ಪಿಒಎಸ್ ಯಂತ್ರವನ್ನು ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮ ಭಟ್ ಹಸ್ತಾಂತರಿಸುವುದರೊಂದಿಗೆ 10 ಸಾವಿರನೆ ಪಿಒಎಸ್ ಯಂತ್ರ ವಿತರಿಸಿ ಅವರು ಮಾತನಾಡಿದರು.
ಬ್ಯಾಂಕ್ ಕಳೆದ 2001ರಿಂದ ಗ್ರಾಹಕರಿಗೆ ಹಣಪಾವತಿ ಹಾಗೂ ಆರ್ಥಿಕ ವಹಿವಾಟಿನ ವೃದ್ಧಿಗಾಗಿ ಪಿಒಎಸ್ ಕೇಂದ್ರ ಗಳನ್ನು (ಮಾರಾಟ ಕೇಂದ್ರ) ಆರಂಭಿಸಿದೆ. ಈ ಪೈಕಿ ಲ್ಯಾಂಡ್ ಲೈನ್, ಜಿಪಿಆರ್‌ಎಸ್, ಡಿಜಿಟಲ್ ರೀತಿಯ ಯಂತ್ರ ಗಳನ್ನು ಕೊಳ್ಳುವಂತೆ ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡು ತ್ತಿದೆ.ಇದರೊಂದಿಗೆ ಬ್ಯಾಂಕ್ ಪಿಒಎಸ್ ಮ್ಯಾನೇಜರ್ ಸೌಲಭ್ಯ ಗಳನ್ನು ಒದಗಿಸಿ ಗ್ರಾಹಕರ ಮೊಬೈಲ್‌ನೊಂದಿಗೆ ಯುಆರ್‌ಎಲ್ ಸಂಪರ್ಕದೊಂದಿಗೆ ಪಾವತಿ ರಸೀದಿ ಮೊದಲಾದ ವ್ಯವಹಾರ ನಡಸಲು ಸಾಧ್ಯ ಎಂದು ಅವರು ತಿಳಿಸಿದರು.
ಬ್ಯಾಂಕ್‌ನ ನೂತನ ಡಿಜಿಟಲ್ ಸೇವಾ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಇದೊಂದು ವೌಲ್ಯವರ್ಧಿತ ಸೇವೆಯಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕ್ ಹಲವಾರು ಡಿಜಿಟಲ್ ಸೇವೆಗಳಾದ ಕೆಬಿಎಲ್ ಸ್ಮಾರ್ಟ್ ಯುಪಿಐ ಆ್ಯಪ್, ಮೊಬೈಲ್-ಇಂಟರ್ನೆಟ್ ಬ್ಯಾಂಕಿಂಗ್‌ನ ಹೊಸ ಆವೃತ್ತಿ, ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳನ್ನು ಆರಂಭಿಸಿದೆ. ಹಣದ ಅಪನಗದೀಕರಣದ ಬಳಿಕ ಬ್ಯಾಂಕ್‌ನ ಮೂಲಕ ಹೆಚ್ಚಿನ ಡಿಜಿಟಲ್ ವ್ಯವಸ್ಥೆಯ ವ್ಯವಹಾರ ಚುರುಕು ಗೊಂಡಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಪಿ.ಜಯರಾಮ ಭಟ್ ತಿಳಿಸಿದ್ದಾರೆ.
ಈ ಸಂದರ್ಭ ಬ್ಯಾಂಕ್‌ನ ಸಿಜಿಎಂ ಮಹಾಬಲೇಶ್ವರ ಎಂ.ಎಸ್, ಎಂಆರ್‌ಎಲ್‌ಪಿ ಪೋಸೋನೆಟ್ ಸಿಇಒ ಪ್ರತಾಪ್ ಪಿ.ವಿ., ಬ್ಯಾಂಕ್‌ನ ಬೆಂಗಳೂರು ಪ್ರಾದೇಶಿಕ ವಿಭಾಗದ ಮುಖ್ಯಸ್ಥ ಗೋಕುಲದಾಸ್ ಪೈ ಮತ್ತಿತರರು ಉಪಸ್ಥಿತರಿದ್ದರು ಎಂದು ಬ್ಯಾಂಕ್‌ನ ಪ್ರಕಟನೆ ತಿಳಿಸಿದೆ.







