Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮತ್ತೊಮ್ಮೆ ಕನ್ನಡಕ್ಕೆ ಅನ್ನಾ ಕರೆನಿನ

ಮತ್ತೊಮ್ಮೆ ಕನ್ನಡಕ್ಕೆ ಅನ್ನಾ ಕರೆನಿನ

ಈ ಹೊತ್ತಿನ ಹೊತ್ತಿಗೆ

ವಾರ್ತಾಭಾರತಿವಾರ್ತಾಭಾರತಿ28 March 2017 6:47 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮತ್ತೊಮ್ಮೆ ಕನ್ನಡಕ್ಕೆ  ಅನ್ನಾ ಕರೆನಿನ

 ಅನುವಾದವೆನ್ನುವುದು ಬಹುಸೂಕ್ಷ್ಮವಾದ ಕೆಲಸ. ಒಂದು ಭಾಷೆಯನ್ನು ಇನ್ನೊಂದು ಭಾಷೆಗೆ ತರುವುದಷ್ಟೇ ಅನುವಾದವಲ್ಲ. ಒಂದು ಸೃಜನಶೀಲ ಕೃತಿಯನ್ನು ಅನುವಾದಿಸುವಾಗ ಆ ಕೃತಿಯ ಜೀವಕ್ಕೆ ಧಕ್ಕೆಯಾಗದ ಹಾಗೆ ನೋಡುವ ಹೊಣೆಗಾರಿಕೆಗಳಿರುತ್ತವೆ. ಅದರ ಆತ್ಮದ ಜೊತೆಗೆಯೇ ಇನ್ನೊಂದು ಭಾಷೆಗೆ ಇಳಿಸಬೇಕು. ಇದೇ ಸಂದರ್ಭದಲ್ಲಿ ಒಂದು ದೇಶ, ಭಾಷೆ, ಸಂಸ್ಕೃತಿಯನ್ನು ತನ್ನ ಭಾಷೆಯಲ್ಲಿ ಓದುವಾಗ ಅವನಿಗದು ಅನ್ಯ ಅನ್ನಿಸದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಅನುವಾದಕನಿಗಿದೆ. ಆದುದರಿಂದಲೇ, ಒಂದೇ ಕೃತಿ ಬೇರೆ ಬೇರೆ ಅನುವಾದಕರ ಮೂಲಕ ಬೇರೆ ಬೇರೆ ಅನುಭವಗಳನ್ನು ಕೊಡಬಹುದು. ಲಿಯೋ ಟಾಲ್‌ಸ್ಟಾಯ್ ಅವರ ‘ಅನ್ನಾ ಕರೆನಿನ’ ಜಗತ್ತಿನ ಮೂಲೆ ಮೂಲೆಗಳಿಗೆ ತಲುಪಿದ ಕಾದಂಬರಿ. ಕನ್ನಡದಲ್ಲೇ ಹಲವು ಬಾರಿ, ಹಲವು ಲೇಖಕರಿಂದ ಕೃತಿ ಅನುವಾದಗೊಂಡಿದೆ. ದಾಸ್ತಯೇವ್‌ಸ್ಟಿಯಿಂದ ‘ಒಂದಿನಿತೂ ಲೋಪಲ್ಲಿದ ಕಲೆ’ ಎಂದು ಬಣ್ಣಿಸಲ್ಪಟ್ಟ ಕಾದಂಬರಿ ಅನ್ನಾ ಕರೆನಿನ. ‘ವಾಸ್ತವವಾದಿ ಕಾದಂಬರಿಯ ಶಿಖರ’ವೆಂದು ಕರೆಯಲ್ಪಡುವ ಈ ಕಾದಂಬರಿಯು 19ನೆ ಶತಮಾನದ ಊಳಿಗಮಾನ್ಯ ರಷ್ಯಾದ ಹಿನ್ನೆಲೆಯಲ್ಲಿ ಸಂತ ಪೀಟರ್ಸ್‌ಬರ್ಗ್‌ನ ಕುಲೀನ ಮನೆತನಕ್ಕೆ ಸೇರಿದ ಅನ್ನಾ ಕರೆನಿನಳ ಬದುಕಿನ ಸೌಂದರ್ಯ, ಘನತೆ ಹಾಗೂ ಬಿಕ್ಕಟ್ಟುಗಳನ್ನು ನಮ್ಮ ಮುಂದಿಡುತ್ತದೆ. ಈ ಕಾದಂಬರಿಯನ್ನು ಇದೀಗ ತೇಜಶ್ರೀ ಅವರು ಮತ್ತೆ ಕನ್ನಡಕ್ಕೆ ತಂದಿದ್ದಾರೆ.

ಅನ್ನಾ ಕರೆನಿನ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರೀತಿಯ ಅನುಭವ ಕೊಡುವ ಕೃತಿ. ಆದುದರಿಂದಲೇ ಅದರ ಮರು ಓದು ಇಂದಿನ ಅಗತ್ಯವಾಗಿದೆ. ತೇಜಶ್ರಿ ಅವರ ಅನುವಾದವೂ ಕೃತಿಯನ್ನು ಇನ್ನಷ್ಟು ಆಪ್ತವನ್ನಾಗಿಸುತ್ತದೆ. ಈ ಕೃತಿಯನ್ನು ಹೊರತಂದಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉದ್ದೇಶವೂ ಇದೇ ಆಗಿದೆ. ಓದುಗರ ತಲೆಮಾರುಗಳು ಬದಲಾದಂತೆ ವಿಶ್ವ ಸಾಹಿತ್ಯದ ವಿಶಿಷ್ಟ ಕೃತಿಗಳನ್ನು ಬೇರೆ ಬೇರೆ ಬಗೆಯಲ್ಲಿ ಮರು ನಿರೂಪಿಸಬೇಕಾದ ಅಗತ್ಯವನ್ನು ಮನಗಂಡು ಇಂತಹ ಕೃತಿಗಳನ್ನು ಮತ್ತೆ ಅನುವಾದಿಸುವ, ಪ್ರಕಟಿಸುವ ಕೆಲಸಕ್ಕೆ ಪ್ರಾಧಿಕಾರ ಇಳಿದಿದೆ. ಅವರ ಪ್ರಯತ್ನ ‘ಅನ್ನಾ ಕರೆನಿನ’ ಕಾದಂಬರಿಯಲ್ಲಂತೂ ಯಶಸ್ವಿಯಾಗಿದೆ. ತೇಜಶ್ರೀ ಅವರ ಅನುವಾದದ ಮೂಲಕ ಕಾದಂಬರಿ ನಮ್ಮೆಲ್ಲರ ಬದುಕಿನ ವೃತ್ತಾಂತವಾಗಿ ಕಾಣಿಸಿಕೊಂಡು ಹತ್ತಿರವಾಗುತ್ತದೆ. ಅನ್ನಾ ಕರೆನಿನ ಅವರ ಪಾತ್ರ ನಮ್ಮಾಳಗಿನ ಸುಖ-ದುಃಖಗಳಾಗಿ ವ್ಯಾಪಿಸುತ್ತಾ, ಬಹುಸಮಯ ಕಾಡುತ್ತದೆ.
240 ಪುಟಗಳ ಈ ಕೃತಿಯ ಮುಖಬೆಲೆ 100 ರೂ. ಆಸಕ್ತರು 080- 23183311 ಅಥವಾ 23183312 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X