ಲೊರೆಟ್ಟೆಪದವು ರಕ್ತದಾನ ಶಿಬಿರ

ಬಂಟ್ವಾಳ, ಮಾ.28: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಗಲ್ಫ್ ಕಮಿಟಿ ಟಿಪ್ಪು ನಗರ ಇದರ ಸಯುಂಕ್ತಾಶ್ರಯದಲ್ಲಿ ಯೇನಪೊಯ ಆಸ್ಪತ್ರೆ ದೇರಳಕಟ್ಟೆ ಸಹಯೋಗದೊಂದಿಗೆ ಕೆ.ಎಂ ಅಬುಲ್ ಬುಶ್ರಾ ಲೊರೆಟ್ಟೆಪದವಿನ ಟಿಪ್ಪು ನಗರದ ಮದ್ರಸದಲ್ಲಿ ಇತ್ತೀಚೆಗೆ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಸಿ.ಎಂ ಅನ್ಸಾರ್ ಬುರ್-ಹಾನಿ ಫೈಝಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಂ ಅಬುಲ್ ಬುಶ್ರಾ ಅಬ್ದುಲ್ಲಾ ಮುಸ್ಲಿಯಾರ್ ಖತೀಬ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಅಧ್ಯಕ್ಷ ನಿಸಾರ್ ದಮ್ಮಾಮ್ ಉಳ್ಳಾಲ, ಕೇಂದ್ರ ಜುಮಾ ಮಸೀದಿ ಕೆಳಗಿನ ಪೇಟೆ ಅಧ್ಯಕ್ಷ ಇಸ್ಮಾಯೀಲ್, ಇಝ್ತತುಲ್ ಇಸ್ಲಾಂ ಯತೀಂಖಾನ ಅಧ್ಯಕ್ಷ ಬಿ.ಅಬ್ದುಲ್ ಹಮೀದ್, ಟಿಪ್ಪು ನಗರದ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಬಿ.ಸುಲೈಮಾನ್,
ಡಿ.ಎ ಅಬ್ಬಾಸ್ ಮುಸ್ಲಿಯಾರ್.ಫಝಲ್ ರೆಹಮಾನ್ ಮುಸ್ಲಿಯಾರ್, ಫಯಾಝ್ ಬೈಂದೂರು ಸಾದಿಕ್ ಪಾವೂರು, ಫೈಝಲ್ ಮಂಚಿ, ಹಾಗೂ ಗಲ್ಪ್ ಕಮಿಟಿ ಇದರ ಸದಸ್ಯರಾದ ಹುಸೈನ್, ರಿಯಾಝ್ ,ನೌಫಲ್, ಸಂಶುದ್ದೀ ನ್,ನೌಷಾದ್, ಅಹಮದ್ ಬಾವ, ಬಾತಿಷ್, ಜಬ್ಬಾರ್,ಆಶಿಕ್,ಸೈಪುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಿ.ಎಂ ಹಂಝ ಮುಸ್ಲಿಯಾರ್ ನಿರೂಪಿಸಿದರು.





