ಮಹಾರಾಷ್ಟ್ರ: ನಾರಾಯಣ ರಾಣೆ ಕಾಂಗ್ರೆಸ್‌ಗೆ ಗುಡ್‌ಬೈ?

ಮುಂಬೈ,ಮಾ. 29: ಕಾಂಗ್ರೆಸ್ ನಾಯಕ ನಾರಾಯಣ ರಾಣೆ ಬಿಜೆಪಿಯತ್ತ ದಾಪುಗಾಲಿಟ್ಟಿದ್ದಾರೆ. ಬಿಜೆಪಿ ಅವರನ್ನುಸ್ವಾಗತಿಸಲು ಸಿದ್ಧವಾಗಿದೆ. ಪಕ್ಷ ಅಧ್ಯಕ್ಷ ಅಮಿತ್ ಶಾರಿಗೆ ಅವರನ್ನು ಪಕ್ಷಕ್ಕೆ ಸ್ವಾಗತಿಸಲು ಸಿದ್ಧ ಎಂದು ಮಹಾರಾಷ್ಟ್ರದ ಬಿಜೆಪಿ ನಾಯಕರುಸೂಚಿಸಿದ್ದಾರೆ. ರಾಣೆಯ ಜೊತೆಗೆ ಪುತ್ರರಾದ ನಿತೇಶ್ ರಾಣೆ ಮತ್ತು ನಿಲೇಶ್ ರಾಣೆ ಕೂಡಾ ಬಿಜೆಪಿ ಸೇರಲಿದ್ದಾರೆ ಎಂದು ನಿಕಟವರ್ತಿ ಮೂಲಗಳು ಹೇಳುತ್ತಿವೆ. ಅಮಿತ್ ಶಾರೊಂದಿಗೆ ಚರ್ಚಿಸಲಿಕ್ಕಾಗಿ ರಾಣೆ ಈಗ ದಿಲ್ಲಿಯಲ್ಲಿದ್ದಾರೆ.
ನಗರಸಭೆ, ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ದಯನೀಯ ಸೋಲಿಗೆ ರಾಣೆ ಕಾರಣವೆಂದು ಕಾಂಗ್ರೆಸ್ ರಾಜ್ಯ ಆಧ್ಯಕ್ಷ ಅಶೋಕ್ ಚವಾಣ್ ಆರೋಪಿಸಿದ್ದರು. ಚವಾಣ್‌ರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಬೇಕೆಂದು ರಾಣೆ ಹೈಕಮಾಂಡನ್ನು ಆಗ್ರಹಿಸಿದ್ದರು. ಅಶೋಕ್ ಚವಾಣ್‌ರ ನಾಯಕತ್ವವನ್ನು ಪ್ರತಿಭಟಿಸಿ ರಾಣೆ ಪಕ್ಷದ ತನ್ನ ಪದಾಧಿಕಾರಗಳಿಗೆ ರಾಜಿನಾಮೆ ಕೊಟ್ಟಿದ್ದಾರೆ. ರಾಣೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಅಧ್ಯಕ್ಷರಾಗಬಯಸುತ್ತಿದ್ದಾರೆ.ಬಿಜೆಪಿಗೆ ಹೋಗುವೆ ಎನ್ನುವುದು ಅವರ ಒತ್ತಡ ತಂತ್ರವಾಗಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.





