ಹೃದ್ರೋಗಿ ಇದ್ದ ಆ್ಯಂಬುಲೆನ್ಸ್ ಕೀ ತೆಗೆದಿರಿಸಿ ಅಮಾನವೀಯತೆ ಮೆರೆದ ಮಹಿಳಾ ವೈದ್ಯೆ

ಕೊಲ್ಲಂ,ಮಾ. 29: ಗಂಭೀರ ಅನಾರೋಗ್ಯ ಇರುವ ವ್ಯಕ್ತಿಗಳನ್ನು ಕರೆದೊಯ್ಯುವ ಆ್ಯಂಬುಲೆನ್ಸ್ ಇಗ್ನಿಷನ್ ಕೀಯನ್ನು ಕಿತ್ತುಕೊಂಡು, ಅದರಲ್ಲಿದ್ದ ಹೃದ್ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯದಂತೆ ಅಡ್ಡಿಪಡಿಸಿದ ಮಹಿಳಾ ವೈದ್ಯೆ ವಿರುದ್ಧ ಕೊಲ್ಲಂ ಈಸ್ಟ್ ಪೊಲೀಸರು ಕೇಸುದಾಖಲಿಸಿದ್ದಾರೆ. ಸಾವುಸಂಭವಿಸಬಹುದಾದ ಆರೋಪವನ್ನು ಮಹಿಳಾ ವೈದ್ಯೆ ಮೇಲೆ ಹೊರಿಸಲಾಗಿದೆ.
ಕೊಲ್ಲಂ ನಗರದಲ್ಲಿ ಕಳೆದ ರವಿವಾರ ಕೇಸಿಗೆ ಕಾರಣವಾದ ಘಟನೆ ನಡೆದಿತ್ತು. ಗಂಭೀರ ಹೃದಯಾಘಾತಕ್ಕೊಳಗಾಗಿದ್ದ ರೋಗಿಯನ್ನು ಕರುನಾಗಪಳ್ಳಿಯಿಂದ ಕೊಲ್ಲಂ ಜಿಲ್ಲಾಸ್ಪತ್ರೆಗೆ ಕರೆತಂದಿದ್ದ ಆ್ಯಂಬುಲೆನ್ಸ್ ತನ್ನ ಕಾರಿಗೆ ತಾಗಿತು ಎಂದು ಮಹಿಳಾ ವೈದ್ಯೆ ಆ್ಯಂಬುಲೆನ್ಸ್ ಮುಂದೆ ಸಂಚರಿಸದಂತೆ ಅಡ್ಡಿಪಡಿಸಿದ್ದರು.
ಆ್ಯಂಬುಲೆನ್ಸ್ ಕೀಯನ್ನು ವೈದ್ಯೆ ಕಿತ್ತುಕೊಂಡದ್ದರಿಂದ ರೋಗಿಯನ್ನು ತಿರುವನಂತಪುರಂಕ್ಕೆ ಕರೆದುಕೊಂಡುಹೋಗುವುದು ಇಪ್ಪತ್ತು ನಿಮಿಷ ತಡವಾಗಿತ್ತು. ನಂತರ ಬೇರೊಂದು ಆ್ಯಂಬುಲೆನ್ಸ್ ನಲ್ಲಿ ರೋಗಿಯನ್ನು ತಿರುವನಂತಪುರಂಗೆ ಕರೆದುಕೊಂಡು ಹೋಗಲಾಗಿತ್ತು.
ವೈದ್ಯ ಅಪರಾಧ ಸ್ಪಷ್ಟವಾದ್ದರಿಮದ ಮಹಿಳಾ ವೈದ್ಯೆಯ ವಿರುದ್ಧ ಕೊಲ್ಲಂ ಈಸ್ಟ್ ಎಸ್ಸೈ ರೂಪೇಶ್ ಪ್ರಕರಣ ದಾಖಲಿಸಿದ್ದಾರೆ. ಮಹಿಳಾ ವೈದ್ಯೆ ತನ್ನ ಕಾರಿಗೆ ಆ್ಯಂಬುಲೆನ್ಸ್ ಚಾಲಕ ಬೇಕು ಬೇಕೆಂದೇ ಗುದ್ದಿದ್ದಾನೆ. ಆತ ಮದ್ಯಪಾನ ಮಾಡಿದ್ದ ಎಂದು ಆರೋಪಿಸಿದ್ದಾರೆ.







